ಉದಯವಾಹಿನಿ, ರಶ್ಮಿಕಾ ವಿಭಿನ್ನ ಪಾತ್ರಗಳನ್ನ ಆಯ್ಕೆ ಮಾಡಿಕೊಳ್ಳುವ ಮೂಲಕ ಸುದ್ದಿಯಾಗುತ್ತಿದ್ದಾರೆ. ಇದೀಗ `ಥಮಾ’ ಚಿತ್ರದಲ್ಲಿ ದೆವ್ವದ ಪಾತ್ರ ಮಾಡಿರುವ ರಶ್ಮಿಕಾ ಹಿಂದಿನ ಪಾತ್ರಗಳಿಗಿಂತ ವಿಭಿನ್ನವಾಗಿ ಕಾಣಿಸ್ಕೊಂಡಿದ್ದಾರೆ.`ಥಮಾ’ ಚಿತ್ರದ ಟ್ರೈಲರ್‌ ರಿಲೀಸ್ ಆಗಿದ್ದು, ರಶ್ಮಿಕಾ ದೆವ್ವದ ಪಾತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಸಿನಿಮಾದಲ್ಲಿ ಆಯುಷ್ಮಾನ್ ಖುರಾನ್‌ ಜೊತೆ ತೆರೆ ಹಂಚಿಕೊಂಡಿದ್ದಾರೆ.
ಥಮಾ ಒಂದು ಹಾರರ್‌ ಸಿನಿಮಾ ಆಗಿದ್ದು,ಫ್ಯಾಂಟಸಿ ಜೊತೆ ಕಾಮಿಡಿ ಕಥೆಯನ್ನು ಹೊಂದಿದೆ. ಹಿಂದ್ಯಾವತ್ತೂ ರಶ್ಮಿಕಾ ಮಂದಣ್ಣ ಈ ರೀತಿಯ ಪಾತ್ರದಲ್ಲಿ ಕಾಣಿಸ್ಕೊಂಡಿರಲಿಲ್ಲ. ಇದೀಗ ತಡ್ಕಾ ಪಾತ್ರದಲ್ಲಿ ಮನುಷ್ಯನನ್ನು ಪ್ರೀತಿಸುವ ದೆವ್ವವಾಗಿ ವಿಭಿನ್ನ ರೂಪದಲ್ಲಿ ತೆರೆ ಮೇಲೆ ಬರಲಿದ್ದಾರೆ. ಭಯ ಹುಟ್ಟಿಸಿ, ಎಮೋಷನಲ್ ಆಗಿ ಕನೆಕ್ಟ್ ಆಗುತ್ತಾರೆ.

Leave a Reply

Your email address will not be published. Required fields are marked *

error: Content is protected !!