ಉದಯವಾಹಿನಿ, ಪ್ರೀತಿಗೆ ವಯಸ್ಸು, ಜಾತಿ, ಬಡವ, ಶ್ರೀಮಂತ ಎಂಬ ಹಂಗಿಲ್ಲ ಅಂತಾರೆ ಅದು ಈ ಇಬ್ಬರ ಜೀವನದಲ್ಲಿ ನಿಜವಾಗಿದೆ. ಜಪಾನ್ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಯುವಕನೊಬ್ಬ ತನ್ನ ಸಹಪಾಠಿಯ ತಾಯಿಯನ್ನೇ ಮದುವೆಯಾಗಿರುವ ಘಟನೆ ವರದಿಯಾಗಿದೆ. 33 ವರ್ಷದ ವ್ಯಕ್ತಿ 54 ವರ್ಷದ ಮಹಿಳೆಯನ್ನು ಮದುವೆಯಾಗಿದ್ದಾರೆ. ಅಂದರೆ ತನಗಿಂತ 21 ವರ್ಷ ದೊಡ್ಡವಳನ್ನು ವರಿಸಿದ್ದಾರೆ. ಇಸಾಮು ಟೊಮಿಯೋಕಾ ಎಂಬಾತ ಮಿಡೋರಿಯನ್ನು ತನ್ನ ಶಾಲಾ ದಿನಗಳಲ್ಲಿ ಪೇರೆಂಟ್ಸ್, ಟೀಚರ್ ಮೀಟಿಂಗ್ನಲ್ಲಿ ಮೊದಲ ಬಾರಿಗೆ ಭೇಟಿಯಾಗಿದ್ದ. ದಶಕಗಳ ಬಳಿಕ ತನ್ನ ಹಳೆಯ ಸಹಪಾಠಿಯ ಬ್ಯೂಟಿ ಸಲೂನ್‌ನಲ್ಲಿ ನಡೆದ ಆಕಸ್ಮಿಕ ಭೇಟಿಯು ಪ್ರೀತಿಯನ್ನು ಮತ್ತೆ ಜೀವಂತಗೊಳಿಸಿತ್ತು. ನಾನು ಆಕೆಯನ್ನು ನೋಡಿದಾಕ್ಷಣ ಪ್ರೀತಿಯಲ್ಲಿ ಬಿದ್ದೆ ಎಂದು ಮಿಡೋರಿಯನ್ನು ಭೇಟಿಯಾದ ದಿನವನ್ನು ನೆನಪಿಸಿಕೊಂಡಿದ್ದಾರೆ.ಇತ್ತೀಚೆಗಷ್ಟೇ ಆಕೆ ಗಂಡನಿಂದ ವಿಚ್ಛೇದನ ಪಡೆದಿದ್ದರು. ತನ್ನನ್ನು ಇಷ್ಟು ಸಣ್ಣವನು ಇಷ್ಟಪಡುತ್ತಿರುವ ಬಗ್ಗೆ ಖುಷಿ ಎನಿಸಿದರೂ ತುಂಬಾ ಆಶ್ಚರ್ಯ ಕೂಡಾ ಆಗಿತ್ತು ಎಂದು ಮಿಡೋರಿ ಹೇಳಿದ್ದಾರೆ.
ಇಬ್ಬರೂ ಪ್ರವಾಸಕ್ಕೆ ಹೋಗಿ ಜತೆಗೆ ಸಮಯ ಕಳೆದಿದ್ದರು. ಬಲೂನ್ಗಳು, ಹೂವುಗಳಿಂದ ತುಂಬಿದ ಹೋಟೆಲ್ ಕೊಠಡಿ ಆತ ಕೊಟ್ಟ ಸರ್ಪ್ರೈಸ್ಗಳಿಂದ ಆತನ ಪ್ರೀತಿಯಲ್ಲಿ ಬೀಳದೆ ಇರಲು ಕಾರಣವೇ ಇರಲಿಲ್ಲ. ಕೊನೆಗೆ ಇಬ್ಬರೂ ಮದುವೆಯಾಗಲು ನಿರ್ಧರಿಸಿದಾಗ ಮಿಡೋರಿ ಕುಟುಂಬದಲ್ಲಿ ಸಾಕಷ್ಟು ವಿರೋಧಗಳು ಕೇಳಿಬಂದವು.
ಮಿಡೋರಿಗೆ ಈಗ 54 ವರ್ಷ ನೀವು ನಿಮ್ಮದೇ ಆದ ಸ್ವಂತ ಮಗುವನ್ನು ಹೊಂದಲು ಸಾಧ್ಯವಿಲ್ಲ, ನಿನಗಿನ್ನೂ 30 ವರ್ಷ ನಿನ್ನ ವಯಸ್ಸಿನವಳನ್ನೇ ಮದುವೆಯಾಗಬಹುದಲ್ಲಾ ಎಂದು ಇಸಾಮುಗೆ ಹಲವರು ಬುದ್ಧಿವಾದ ಹೇಳಿದ್ದರು.
ಆತ ತನ್ನ ಪ್ರಾಮಾಣಿಕತೆಯನ್ನು ಸಾಬೀತುಪಡಿಸಲು ಟೋಮಿಯೋಕಾದಲ್ಲಿ ಮನೆಯನ್ನು ಖರೀದಿಸಿ, ಮಿಡೋರಿ ಪೋಷಕರೆದುರು ಆಕೆಯನ್ನು ಮದುವೆ ಮಾಡಿಕೊಡುವಂತೆ ಧೈರ್ಯದಿಂದ ಕೇಳಿದ್ದ, ಅಂತಿಮವಾಗಿ ಇಬ್ಬರೂ ಹಿರಿಯರ ಆಶೀರ್ವಾದ ಸಿಕ್ಕಿತ್ತು. 2024ರ ಜುಲೈನಲ್ಲಿ ತಮ್ಮ ಮದುವೆಯನ್ನು ಅಧಿಕೃತವಾಗಿ ನೋಂದಾಯಿಸಿಕೊಂಡರು.ಟೊಮಿಯೋಕಾ ಮಿಡೋರಿಯ ಮಗಳಿಗೆ ಮಲತಂದೆ ಮಾತ್ರವಲ್ಲದೆ ಅವರ ನಾಲ್ವರು ಮೊಮ್ಮಕ್ಕಳಿಗೆ ಅಜ್ಜನೂ ಆಗಿದ್ದಾರೆ.
