ಉದಯವಾಹಿನಿ , ಬೆಂಗಳೂರು: ನಗರದ ಹೊರವಲಯದಲ್ಲಿ ದರೋಡೆಕೋರರ ಹಾವಳಿ ಹೆಚ್ಚಾಗಿದ್ದು, ಮೂರೇ ಬರೋಬ್ಬರಿ 37 ದರೋಡೆ ಪ್ರಕರಣಗಳು ನಡೆದಿವೆ. ಪೊಲೀಸರು ರಾತ್ರಿ ಪೂರ್ತಿ ನಿದ್ರೆ ಬಿಟ್ಟು 6 ಜನ ಅಪ್ರಾಪ್ತರ ಗ್ಯಾಂಗ್‍ನ್ನು ಪೊಲೀಸರು ಬಂಧಿಸಿದ್ದಾರೆ.ಮಾದನಾಯಕನಹಳ್ಳಿ, ದೊಡ್ಡಬಳ್ಳಾಪುರ ಸೂರ್ಯನಗರ, ನೆಲಮಂಗಲ ಹಾಗೂ ಬ್ಯಾಡರಹಳ್ಳಿ ಭಾಗದಲ್ಲಿ ದರೋಡೆ ಪ್ರಕರಣಗಳು ನಡೆದಿದ್ದವು. ಈ ಗ್ಯಾಂಗ್ ಹಣ ಕೊಟ್ರೆ ಸುಮ್ಮನಾಗುತ್ತಿತ್ತು. ಹಣ ಕೊಡದಿದ್ದರೆ ಚಾಕು ಹಾಕಿ ಪರಾರಿಯಾಗುತ್ತಿದ್ದರು.
ಈ ಅಪ್ರಾಪ್ತ ಆರೋಪಿಗಳು ರಾತ್ರಿ ಹೊತ್ತು ಮೂರು ಬೈಕ್‍ನಲ್ಲಿ ಸುತ್ತಾಡುತ್ತಿದ್ದರು. ಮೊದಲ ದಿನ ದೊಡ್ಡಬಳ್ಳಾಪುರ ಸುತ್ತಮುತ್ತ ದರೋಡೆ ಮಾಡಿ, ಎರಡನೇ ದಿನ ಮಾದನಾಯಕನಹಳ್ಳಿ, ನೆಲಮಂಗಲ ಭಾಗದಲ್ಲಿ ದರೋಡೆ ಮಾಡಿದ್ದರು. ಮೂರನೇ ದಿನ ಸೂರ್ಯನಗರ ಸುತ್ತಮುತ್ತ ದರೋಡೆ ಮಾಡಿದ್ದರು. ಹೀಗೆ ಬರೋಬ್ಬರಿ ಮೂರು ದಿನದಲ್ಲಿ 37 ಕಡೆ ಅಪ್ರಾಪ್ತರ ಗ್ಯಾಂಗ್ ದರೋಡೆ ಮಾಡಿತ್ತು.
