ಉದಯವಾಹಿನಿ, ಶಬರಿಮಲೆಯಂತಹ ಲಕ್ಷಾಂತರ ಭಕ್ತರು ಭೇಟಿ ನೀಡುವ ಪವಿತ್ರ ಕ್ಷೇತ್ರದಲ್ಲಿ, ದೇವರ ಆಭರಣಕ್ಕೇ ಕನ್ನ ಬಿದ್ದಿದೆ ಎಂಬ ಸುದ್ದಿ ಇಡೀ ಭಕ್ತ ಸಮೂಹಕ್ಕೆ ಆಘಾತವನ್ನುಂಟು ಮಾಡಿತ್ತು. ದೇವಸ್ಥಾನದ ಗರ್ಭಗುಡಿಯ ಚಿನ್ನದ ಲೇಪನ ಕಾಮಗಾರಿಯ ಸಮಯದಲ್ಲಿ ಸುಮಾರು 4.45 ಕೆಜಿ ಚಿನ್ನ ನಾಪತ್ತೆಯಾಗಿದ್ದು (4.45 kg of gold goes missing), ಈ ಪ್ರಕರಣ ಇದೀಗ ಕೇರಳ ಹೈಕೋರ್ಟ್ ಅಂಗಳದಲ್ಲಿದೆ ಮತ್ತು ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ. ಆದರೆ ಈ ತನಿಖೆಯ ನಡುವೆ ಇದೀಗ ನಾಪತ್ತೆಯಾಗಿರುವ ಚಿನ್ನ ದಿಢೀರ್ ಪತ್ತೆಯಾಗಿದೆ.
ಕಳ್ಳತನ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಶಬರಿಮಲೆಯಲ್ಲಿ ಕಾಣೆಯಾದ ದ್ವಾರಪಾಲಕ ಶಿಲ್ಪ ಪೀಠದಲ್ಲಿ ಕಾಣೆಯಾದ ಚಿನ್ನ ಇದೀಗ ದೂರುದಾರರ ಸಂಬಂಧಿಕರ ಮನೆಯಲ್ಲೇ ಪತ್ತೆಯಾಗಿದೆ. ಸದ್ಯ ಈ ಪ್ರಕರಣದ ಬಗ್ಗೆ ಭಾರೀ ಕುತೂಹಲ ಹುಟ್ಟಿಸಿದೆ. ಪೀಠ ಕಾಣೆಯಾಗಿದೆ ಎಂದು ಆರೋಪಿಸಿದ್ದ ಪ್ರಾಯೋಜಕ ಉನ್ನಿಕೃಷ್ಣನ್ ಪೊಟ್ಟಿ ಅವರ ಸಂಬಂಧಿಕರ ಮನೆಯಲ್ಲಿ ಇದೀಗ ಚಿನ್ನ ಪತ್ತೆಯಾಗಿದೆ. ವೆಂಜಾರಮೂಡಿನಲ್ಲಿರುವ ಉನ್ನಿಕೃಷ್ಣನ್ ಪೊಟ್ಟಿ ಅವರ ಸಂಬಂಧಿಯ ಮನೆಯಿಂದ ವಿಜಿಲೆನ್ಸ್‌ ಸ್ಕ್ವಾಡ್‌ ಚಿನ್ನವನ್ನು ವಶಕ್ಕೆ ಪಡೆದುಕೊಂಡಿದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!