ಉದಯವಾಹಿನಿ, ದುಬೈ: ಏಷ್ಯಾಕಪ್‌ ಫೈನಲ್‌ ಮುಗಿದ ಬಳಿಕವೂ ಹೈಡ್ರಾಮಾ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಟ್ರೋಫಿ ಎತ್ತಿಕೊಂಡು ಹೋಗಿ ಟ್ರೋಲ್‌ ಆದ ಬೆನ್ನಲ್ಲೇ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಮುಖ್ಯಸ್ಥ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಅಧ್ಯಕ್ಷ ಮೊಹ್ಸಿನ್ ನಖ್ವಿ (Mohsin Naqvi) ಹೊಸ ನಾಟಕ ಆಡಲು ಆರಂಭಿಸಿದ್ದಾರೆ.
ನಾನು ಟ್ರೋಫಿಯನ್ನು ಟೀಂ ಇಂಡಿಯಾಗೆ ನೀಡುತ್ತೇನೆ. ಆದರೆ ‘ಔಪಚಾರಿಕ ಸಮಾರಂಭ’ವನ್ನು ಆಯೋಜಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ತನ್ನ ಕೈಯಿಂದ ಟ್ರೋಫಿ ಪಡೆಯಲು ಭಾರತ ನಿರಾಕರಿಸಿದ ಬೆನ್ನಲ್ಲೇ ನಖ್ವಿ ಎಸಿಸಿ ಈ ಹೊಸ ಷರತ್ತನ್ನು ನಖ್ವಿ ಇರಿಸಿದ್ದಾರೆ. ಆದರೆ ಈ ರೀತಿಯ ಕಾರ್ಯಕ್ರಮ ನಡೆಯದ ಟ್ರೋಫಿ ಹೇಗೆ ಭಾರತಕ್ಕೆ ಹೇಗೆ ಹಸ್ತಾಂತರವಾಗುತ್ತದೆ ಎನ್ನುವುದೇ ಸದ್ಯ ಕುತೂಹಲ.
ನಖ್ವಿ ನಡೆ ವಿರುದ್ಧ ಐಸಿಸಿಗೆ ದೂರು ನೀಡಲು ಬಿಸಿಸಿಐ ನಿರ್ಧರಿಸಿದೆ. ಟೀಂ ಇಂಡಿಯಾದ ನಿಲುವನ್ನು ಬಿಸಿಸಿಐ ಸಮರ್ಥಿಸಿಕೊಂಡಿದೆ. ನಮ್ಮ ವಿರುದ್ಧ ಯುದ್ಧ ನಡೆಸುತ್ತಿರುವ ವ್ಯಕ್ತಿಯಿಂದ ಭಾರತ ಟ್ರೋಫಿ ಸ್ವೀಕರಿಸಲು ಸಾಧ್ಯವಿಲ್ಲ. ಟ್ರೋಫಿ ಮತ್ತು ಪದಕಗಳನ್ನು ಆದಷ್ಟು ಬೇಗ ಭಾರತಕ್ಕೆ ಹಿಂದಿರುಗಿಸುತ್ತಾರೆ ಎಂದು ನಾವು ಭಾವಿಸುತ್ತೇವೆ ಅಂದಿದೆ. ಹೀಗಾಗಿ ನವೆಂಬರ್‌ನಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ಪ್ರತಿಭಟಿಸಲು ಬಿಸಿಸಿಐ ನಿರ್ಧರಿಸಿದೆ.

Leave a Reply

Your email address will not be published. Required fields are marked *

error: Content is protected !!