ಉದಯವಾಹಿನಿ, ಇಸ್ಲಮಾಬಾದ್‌: ಭಾರತ ನನ್ನ ಮಾತೃಭೂಮಿ, ಪಾಕ್‌ ನನ್ನ ಜನ್ಮಭೂಮಿ, ಭಾರತ ನನಗೆ ದೇಗುಲವಿದ್ದಂತೆ ಎಂದು ಪಾಕ್ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ ಹೇಳಿಕೊಂಡಿದ್ದಾರೆ.ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ನೀವು ಪಾಕಿಸ್ತಾನದ ಬಗ್ಗೆ ಏಕೆ ಮಾತನಾಡುವುದಿಲ್ಲ? ಭಾರತದ ಆಂತರಿಕ ವಿಷಯಗಳ ಬಗ್ಗೆ ಏಕೆ ಪ್ರತಿಕ್ರಿಯಿಸುತ್ತೀರಿ ಎಂದು ಹಲವರು ನನ್ನನ್ನು ಪ್ರಶ್ನಿಸುತ್ತಾರೆ. ಕೆಲವರು ಭಾರತದ ಪೌರತ್ವಕ್ಕಾಗಿ ನಾನು ಹೀಗೆ ನಡೆದುಕೊಳ್ಳುತ್ತೇನೆ ಎಂದು ಆರೋಪಿಸುತ್ತಿದ್ದಾರೆ.
ನನಗೆ ಭಾರತದ ಪೌರತ್ವ ಪಡೆಯುವ ಯಾವ ಆಲೋಚನೆಯೂ ಇಲ್ಲ. ಮುಂದೆ ನನ್ನಂತವರಿಗೆ ಅಂತಹ ಯೋಚನೆ ಬಂದರೆ ಸಿಎಎ ಈಗಾಗಲೇ ಜಾರಿಯಲ್ಲಿದೆ. ಪಾಕಿಸ್ತಾನ ನನ್ನ ಜನ್ಮಭೂಮಿಯಾಗಿರಬಹುದು ಆದರೆ ಭಾರತ ನನ್ನ ಪೂರ್ವಜರ ಭೂಮಿ, ನನ್ನ ಮಾತೃಭೂಮಿ. ನನ್ನ ಪಾಲಿಗೆ ಭಾರತ ಒಂದು ದೇವಾಲಯದಂತೆ ಎಂದು ಗೌರವಯುತ ಸಾಲುಗಳಲ್ಲಿ ಹಿಂದೂಸ್ಥಾನವನ್ನು ಕೊಂಡಾಡಿದ್ದಾರೆ.
ನನ್ನ ಮಾತುಗಳು ಭಾರತದ ಪೌರತ್ವಕ್ಕಾಗಿ ಎಂಬ ಆರೋಪ ಸಂಪೂರ್ಣ ತಪ್ಪು. ನಾನು ಧರ್ಮದ ಪರವಾಗಿ ನಿಲ್ಲುವುದನ್ನು ಮತ್ತು ನಮ್ಮ ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ರಾಷ್ಟ್ರವಿರೋಧಿಗಳು, ಹುಸಿ ಜಾತ್ಯತೀತರ ವಿರುದ್ಧದ ಸಮರವನ್ನು ಮುಂದುವರಿಸುತ್ತೇನೆ. ಪಾಕಿಸ್ತಾನದ ಜನರಿಂದಲೂ ನಾನು ಪ್ರೀತಿಯನ್ನು ಪಡೆದಿದ್ದೇನೆ. ಆ ಪ್ರೀತಿಯ ಜೊತೆಗೆ, ಬಲವಂತದ ಮತಾಂತರದ ಪ್ರಯತ್ನ, ಪಾಕ್‌ನ ಅಧಿಕಾರಿಗಳು ಮತ್ತು ಪಿಸಿಬಿಯಿಂದ (PCB) ತಾರತಮ್ಯವನ್ನು ಸಹ ಎದುರಿಸಿದ್ದೇನೆ ಎಂದು ತಾವು ಅನುಭವಿಸಿದ ಸಂಕಷ್ಟವನ್ನು ತೋಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!