ಉದಯವಾಹಿನಿ,ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಉಭಯ ಸದನವನ್ನು ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ ಮಾತನಾಡಿದ ಅವರು ಕುವೆಂಪು ಸೇರಿದಂತೆ ನಾಡಿನ ನಾನಾ ಕವಿಗಳ ಆಶಯವನ್ನು ತಿಳಿಸಿದರು. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಸರ್ಕಾರವನ್ನು ನಡೆಸಲಾಗುವುದು ಅಂಥ ತಿಳಿಸಿದರು. ಇನ್ನೂ ರಾಜ್ಯದ ಸರ್ವೋತ್ತಮ ಅಭಿವೃದ್ದಿಗೆ ಬದ್ದವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲಾ ರೀತಿಯಲ್ಲಿ ಪ್ರಯತ್ನ ನಡೆಸಲಾಗುವುದು ಅಂತ ತಿಳಿಸಿದರು.
ಅನ್ನದಾತನದ ಯೋಜನೆ ಮೂಲಕ ಎಲ್ಲರಿಗೂ 5 ಕೆಜಿ ಅಕ್ಕಿಯನ್ನು ನೀಡಲಾಗುವುದು ಅಂಥ ತಿಳಿಸಿದ ಅವರು ಈ ಮೂಲಕ ಹಸಿವು ಮುಕ್ತ ಕರ್ನಾಟಕವನ್ನು ಮಾಡಲಾಗುವುದು ಅಂತ ತಿಳಿಸಿದರು. ಈ ಯೋಜನೆ ಆರಂಭದಲ್ಲಿ ಸದ್ಯ ಹಣವನ್ನು ಡಿಬಿಟಿ ಮೂಲಕ ಹಣವನ್ನು ನೀಡಲಾಗುವುದು. ಇಂದಿರಾ ಕ್ಯಾಂಟಿನ್ ಮೂಲಕ ಹಸಿವು ನೀಗಿಸುವುದಕ್ಕೆ ಮುಂದಾಗಿದ್ದಾವೆ ಅಂತ ತಿಳಿಸಿದ ಅವರು ಅನ್ನದಾತನದ ಯೋಜನೆ ಮೂಲಕ ಎಲ್ಲರಿಗೂ 5 ಕೆಜಿ ಅಕ್ಕಿಯನ್ನು ನೀಡಲಾಗುವುದು ಅಂಥ ತಿಳಿಸಿದ ಅವರು ಈ ಮೂಲಕ ಹಸಿವು ಮುಕ್ತ ಕರ್ನಾಟಕವನ್ನು ಮಾಡಲಾಗುವುದು ಅಂತ ತಿಳಿಸಿದ್ದಾರೆ.
