ಉದಯವಾಹಿನಿ, ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಮಾರ್ನಸ್ ಲಬುಶೇನ್ ಮೊದಲ ಬಾರಿಗೆ ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಆಡುತ್ತಿದ್ದು, ಬಯಸದೆ ಬಂದ ಭಾಗ್ಯವೆಂಬಂತೆ ತಮ್ಮ ಮೊದಲ ಸೀಸನ್‌ನಲ್ಲಿಯೇ ತಂಡದ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಲಬುಶೇನ್ ಹೈದರಾಬಾದ್ ಕಿಂಗ್ಸ್‌ಮೆನ್ ತಂಡದ ನಾಯಕರಾಗಿ ನೇಮಕಗೊಂಡಿದ್ದಾರೆ.
ಪಾಕಿಸ್ತಾನ ಸೂಪರ್ ಲೀಗ್‌ನ ಈ ಹೊಸ ತಂಡದ ಜವಾಬ್ದಾರಿಯನ್ನು ಮಾರ್ನಸ್ ಲಬುಶೇನ್ ವಹಿಸಿಕೊಳ್ಳಲಿದ್ದಾರೆ ಎಂದು ಫ್ರಾಂಚೈಸಿ ಘೋಷಿಸಿದೆ. ವಾಸ್ತವವಾಗಿ ಮಾರ್ನಸ್ ಲಬುಶೇನ್ ಅವರಿಗೆ ಟಿ20 ಕ್ರಿಕೆಟ್‌ನಲ್ಲಿ ಹೆಚ್ಚಿನ ಅನುಭವವಿಲ್ಲ. ಅದರಲ್ಲೂ ಫ್ರಾಂಚೈಸ್ ಕ್ರಿಕೆಟ್​ನಲ್ಲಿ ಲಬುಶೇನ್ ಕೇವಲ ಬಿಗ್ ಬ್ಯಾಷ್ ಲೀಗ್‌ನಲ್ಲಿ ಆಡಿದ್ದು, ಇದಲ್ಲದೆ, ಅವರು ಇಂಗ್ಲೆಂಡ್‌ನ ಟಿ20 ಬ್ಲಾಸ್ಟ್ ಸ್ಪರ್ಧೆಯಲ್ಲಿಯೂ ಭಾಗವಹಿಸಿದ್ದಾರೆ.
ಲಬುಶೇನ್ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ನಲ್ಲಿ ಉತ್ತಮ ಆಟಗಾರ, ಆದರೆ ಟಿ20 ಕ್ರಿಕೆಟ್‌ನಲ್ಲಿ ಅವರದ್ದು ದೊಡ್ಡ ಹೆಸರಲ್ಲ. ತಮ್ಮ ವೃತ್ತಿಜೀವನದಲ್ಲಿ ಕೇವಲ 55 ಟಿ20 ಪಂದ್ಯಗಳನ್ನು ಆಡಿರುವ ಲಬುಶೇನ್ 26.5 ಸರಾಸರಿಯಲ್ಲಿ 1381 ರನ್ ಗಳಿಸಿದ್ದಾರೆ. ಇದರಲ್ಲಿ ಕೇವಲ 8 ಅರ್ಧಶತಕಗಳು ಸೇರಿವೆ. ಅಚ್ಚರಿಯ ಸಂಗತಿಯೆಂದರೆ ಹೈದರಾಬಾದ್ ಕಿಂಗ್ಸ್‌ಮೆನ್ ತಂಡದಲ್ಲಿ ಟಿ20 ಕ್ರಿಕೆಟ್‌ನ ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಇದ್ದಾರಾದರೂ ಅವರಿಗೆ ನಾಯಕತ್ವವನ್ನು ನೀಡಲಾಗಿಲ್ಲ. ಮ್ಯಾಕ್ಸ್‌ವೆಲ್ ಇಡೀ ಸೀಸನ್​ಗೆ ಲಭ್ಯವಿಲ್ಲದಿರುವ ಸಾಧ್ಯತೆಯಿದೆ, ಅದಕ್ಕಾಗಿಯೇ ಲಬುಶೇನ್ ಅವರಿಗೆ ನಾಯಕತ್ವವನ್ನು ನೀಡಲಾಗಿದೆ.

Leave a Reply

Your email address will not be published. Required fields are marked *

error: Content is protected !!