ಉದಯವಾಹಿನಿ, ರಾಮನಗರ: ಜಾಲಿವುಡ್ ಸ್ಟುಡಿಯೋಗೆ ರಾತ್ರೋರಾತ್ರಿ ಅನುಮತಿ ನೀಡಿ ಗೇಟ್ ಓಪನ್ ಮಾಡಿದ ಹಿನ್ನೆಲೆ ಜಿಲ್ಲಾಡಳಿತದ ನಡೆ ಖಂಡಿಸಿ ಕನ್ನಡಪರ ಸಂಘಟನೆಗಳು ಜಾಲಿವುಡ್ ಎದುರು ಪ್ರತಿಭಟನೆ ನಡೆಸಿದೆ.ಸರ್ಕಾರ ನಿಯಮ ಬಾಹಿರವಾಗಿ ಅನುಮತಿ ನೀಡಿದೆ. ಡಿಸಿಎಂ ಡಿಕೆಶಿ ಜಾಲಿವುಡ್ ಜೊತೆ ಡೀಲ್ ಮಾಡಿಕೊಂಡು ಓಪನ್ ಮಾಡಲು ಅವಕಾಶ ಕೊಟ್ಟಿದ್ದಾರೆ ಎಂದು ಕಿಡಿಕಾರಿದ ಹೋರಾಟಗಾರರು, ಗೇಟ್ ಮೇಲೆ ಹತ್ತಿ ಹೈಡ್ರಾಮ ಸೃಷ್ಟಿಸಿದರು. ಕಾಂಪೌಂಡ್ ಹಾರಿ ಒಳನುಗ್ಗಲು ಯತ್ನಿಸಿದರು.
ಈ ವೇಳೆ ಜಾಲಿವುಡ್ ಸೆಕ್ಯುರಿಟಿ ಹಾಗೂ ಹೋರಾಟಗಾರರ ನಡುವೆ ವಾಗ್ವಾದ ನಡೆದಿದ್ದು, ಕೂಡಲೇ ಜಾಲಿವುಡ್ ಸಂಪೂರ್ಣ ಸ್ಥಗಿತ ಮಾಡುವಂತೆ ಒತ್ತಾಯಿಸಿದರು. ಸ್ಥಳಕ್ಕೆ ಬಿಡದಿ ಪೊಲೀಸರು ಆಗಮಿಸಿ ಪ್ರತಿಭಟನಾಕಾರರನ್ನ ವಶಕ್ಕೆ ಪಡೆದರು. ಕನ್ನಡಪರ ಹೋರಾಟಗಾರರನ್ನು ಬಂಧಿಸಿ ಜೀಪ್‌ನಲ್ಲಿ ಕರೆದೊಯ್ದು ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
