ಉದಯವಾಹಿನಿ, ಋತುಗಳು ಬದಲಾದಂತೆ ನಮ್ಮ ದೇಹದ ಆರೋಗ್ಯದಲ್ಲಿ ಅನೇಕ ಬದಲಾವಣೆಗಳು ಕಂಡು ಬರುವುದು ಸಹಜ. ಆದರೆ ಇತ್ತೀಚಿನ ಜನಾಂಗದಲ್ಲಿ ಬದಲಾದ ಜೀವನ ಶೈಲಿ ಹಾಗೂ ಕೆಲವು ಹವ್ಯಾಸಗಳು ಕೂಡ ನಮ್ಮ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರು ತ್ತಿದೆ. ಹೀಗಾಗಿ ನಮ್ಮ ಜೀವನ ಶೈಲಿಯಲ್ಲಿ ನಿಗಾವಹಿಸುವುದು ಅತ್ಯವಶ್ಯಕವಾಗಿದೆ. ಅಂತೆಯೇ ಈಗ ಚಳಿಗಾಲ ಇದ್ದ ಕಾರಣ ಶೀತ , ಜ್ವರ , ಕೆಮ್ಮು ನಂತಹ ಅನೇಕ ರೋಗಗಳು ಕಂಡು ಬರುವ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಚಳಿಗಾಲದಲ್ಲಿ ನಾವು ಯಾವ ರೀತಿಯ ಜೀವನ ಶೈಲಿಯನ್ನು ಹವ್ಯಾಸವಾಗಿ ಅನುಸರಿಸಬೇಕು ಎಂಬ ಬಗ್ಗೆ ಇತ್ತೀಚೆಗಷ್ಟೇ ವಿಶ್ವವಾಣಿ ಹೆಲ್ತ್ ಚಾನೆಲ್ ನಲ್ಲಿ ಖ್ಯಾತ ಆಯುರ್ವೇದ ತಜ್ಞರಾದ ಡಾ. ಮಲ್ಲಿಕಾರ್ಜುನ ಡಂಬಳ ಅವರು ತಿಳಿಸಿ ಕೊಟ್ಟಿದ್ದಾರೆ. ಆಯುರ್ವೇದ ಶಾಸ್ತ್ರದ ಪ್ರಕಾರ ಚಳಿಗಾಲದಲ್ಲಿ ಶರೀರದ ಬಲ ಹೆಚ್ಚಾಗಿ ಇರಲಿದೆ. ಆದರೆ ಇದೇ ಕಾಲಕ್ಕೆ ಜನರಿಗೆ ಸೂಕ್ಷ್ಮಾಣು ವೈರಾಣುಗಳಿಂದ ಕಾಯಿಲೆ ಬರುವ ಪ್ರಮಾಣ ಹೆಚ್ಚಾಗಿದ್ದು ವಿಪರ್ಯಾಸವಾಗಿದೆ. ಹೀಗಾಗಿ ಈ ಕಾಲದಲ್ಲಿ ನಾವು ಸೇವಿಸುವ ಆಹಾರವು ಚಳಿಗಾಲಕ್ಕೆ ಸೂಕ್ತವಾಗಿರುವಂತೆ ನೋಡಿಕೊಂಡರೆ ಯಾವುದೆ ಸಮಸ್ಯೆ ಬರಲಾರದು ಎಂಬ ಬಗ್ಗೆ ಅವರು ಸಲಹೆ ನೀಡಿದ್ದಾರೆ .
ಮಳೆಗಾಲ ಮುಗಿಸಿ ಚಳಿಗಾಲ ಆರಂಭವಾಗಿದ್ದ ಕಾರಣ ಬಹುತೇಕರು ತಾವು ಸೇವಿಸುವ ಆಹಾರಗಳ ಬಗ್ಗೆ ಅಷ್ಟಾಗಿ ಕಾಳಜಿ ಹೊಂದಿಲ್ಲ. ಮಳೆ ಇಲ್ಲ ಶೀತ , ಕೆಮ್ಮು ಭಯ ಪಡುವ ಅಗತ್ಯ ಇಲ್ಲ ಕಾರಣಕ್ಕೆ ಬೇಸಿಗೆ ಕಾಲಕ್ಕೆ ಸೇವಿಸುವ ಆಹಾರವನ್ನೇ ಚಳಿಗಾಲಕ್ಕೂ ಸೇವಿಸುತ್ತಾರೆ. ಇದೇ ಆಹಾರದ ಕ್ರಮದಿಂದ ಬಹುತೇಕರು ಕಾಯಿಲೆಗೆ ಒಳಗಾಗುತ್ತಿದ್ದಾರೆ. ಇದರ ಜೊತೆಗೆ ರಾತ್ರಿಯ ಸಮಯ ಚಳಿಗಾಲದಲ್ಲಿ ಅಧಿಕ ಇದ್ದು ಹಗಲು ಕಡಿಮೆ ಇರಲಿದೆ. ಹೀಗಾಗು ನಿದ್ದೆ ಅಧಿಕ ಮಾಡಬೇಕು ಆದರೆ ಬಹುತೇಕರು ನಿದ್ದೆ ಬಿಟ್ಟು ನಿದ್ರಾಹೀನತೆ ಸಮಸ್ಯೆಗೆ ಒಗ್ಗಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ಚಳಿಗಾಲದಲ್ಲಿ ಚರ್ಮ ಒಣಗುವುದು, ಕೀಲು ನೋವು ಬರುವುದು ಇಂತಹ ಸಮಸ್ಯೆ ಸಾಮಾನ್ಯ ವಾಗಿದೆ. ನೆಗಡಿ, ಕಫ, ಅಸ್ತಮ ಇತ್ಯಾದಿ ಕಾಯಿಲೆಗಳು ಕೂಡ ಚಳಿಗಾಲದಲ್ಲಿ ಕಂಡು ಬರುತ್ತದೆ. ಹೀಗಾಗಿ ಔಷಧಗಳ ಮೊರೆ ಹೋಗುವ ಮೊದಲು ಆಹಾರ ಮತ್ತು ಜೀವನ ಶೈಲಿ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರಬೇಕು. ನಿದ್ರೆ ಚೆನ್ನಾಗಿ ಮಾಡಬೇಕು, ಚಳಿಗಾಲದಲ್ಲಿ ಶರೀರದ ವರ್ಧನೆ, ಶರೀರದ ಬಲ ಹೆಚ್ಚಿಸಿಕೊಳ್ಳಲು, ದೀರ್ಘಾಯುಷ್ಯಕ್ಕೆ ಎಲ್ಲದಕ್ಕೂ ನಿದ್ರೆ ಬಹಳ ಅಗತ್ಯ. ರಾತ್ರಿ ಬೇಗ ಮಲಗಿ ಬೆಳಗ್ಗೆ ಶೀತಗಾಳಿ ಎಲ್ಲ ಕಡಿಮೆ ಆದ ಬಳಿಕ ಎದ್ದರೆ ಅದು ಬಹಳ ಉತ್ತಮ ಎಂದು ಅವರು ಸಲಹೆ ನೀಡಿದ್ದಾರೆ.
