ಉದಯವಾಹಿನಿ, ಕರ್ಪೂರದ ಪ್ರಯೋಜನಗಳನ್ನು ತಿಳಿದರೆ ನೀವು ಆಶ್ಚರ್ಯಚಕಿತರಾಗ್ತೀರಿ. ಇದು ಆರೋಗ್ಯಕ್ಕೆ ಮಾತ್ರವಲ್ಲ, ಮನೆಯ ನಿರ್ವಹಣೆಗೂ ಪ್ರಯೋಜನ. ಪೂಜಾ ಕೋಣೆಯಲ್ಲಿ ಬೆಳಗುವ ದೀಪವಾಗಿ ಕರ್ಪೂರವನ್ನು ಬಳಸಿಕೊಳ್ತೇವೆ. ಆದರೆ ಕರ್ಪೂರ ಭಕ್ತಿಗೆ ಮಾತ್ರವಲ್ಲ, ಮನೆಯ ನಿರ್ವಹಣೆಯಲ್ಲಿಯೂ ಅದ್ಭುತ ಪವಾಡಗಳ ಸೃಷ್ಟಿಸುತ್ತದೆ. ಇರುವೆಗಳು ಮತ್ತು ಸೊಳ್ಳೆಗಳನ್ನು ಹಿಮ್ಮೆಟ್ಟಿಸೋದ್ರಿಂದ ಹಿಡಿದು ನೋವು ಕಡಿಮೆ ಮಾಡೋವರೆಗೂ ಕರ್ಪೂರಕ್ಕಿರುವ ಅದ್ಭುತ ಶಕ್ತಿಯನ್ನು ತಿಳಿದುಕೊಳ್ಳಿ.
ಕೀಟಗಳ ನಿವಾರಣೆ..
ಮನೆಯಲ್ಲಿ ಜಿರಳೆಗಳು ಮತ್ತು ಹಲ್ಲಿಗಳು ಹೆಚ್ಚಾಗಿದ್ದರೆ ಎರಡು ಗ್ಲಾಸ್ ನೀರಿನಲ್ಲಿ ಕರ್ಪೂರ ಪುಡಿ, ಅರಿಶಿಣ, ಕಲ್ಲುಪ್ಪು ಮತ್ತು ಸ್ವಲ್ಪ ಶಾಂಪೂ ಬೆರೆಸಿ ಸ್ಪ್ರೇ ಬಾಟಲಿಗೆ ಸುರಿಯಿರಿ. ಕೀಟಗಳು ಓಡಾಡುವ ಸ್ಥಳದಲ್ಲಿ ಸಿಂಪಡಿಸಿದರೆ, ಅವು ಕ್ಷಣಾರ್ಧದಲ್ಲಿ ಓಡಿಹೋಗುತ್ತವೆ. ಮನೆಯನ್ನು ಒರೆಸಲು ಬಳಸುವ ನೀರಿಗೆ ಈ ಮಿಶ್ರಣ ಸೇರಿಸಿದರೆ ಕೋಣೆ ಉತ್ತಮ ವಾಸನೆ ನೀಡುತ್ತದೆ. ಅಂದರೆ ಇದು ಸೂಕ್ಷ್ಮಜೀವಿಗಳನ್ನು ದೂರವಿಡುತ್ತದೆ.
ಇರುವೆಗಳು ಸಕ್ಕರೆ ಮತ್ತು ಬೆಲ್ಲದ ಡಬ್ಬಿಗಳ ಮೇಲೆ ದಾಳಿ ಮಾಡುತ್ತಿದ್ದರೆ ಕರ್ಪೂರದ ಪುಡಿಯನ್ನು ನೀರಿನಲ್ಲಿ ಬೆರೆಸಿ ಆ ನೀರಿನಿಂದ ಡಬ್ಬಿಗಳನ್ನು ಒರೆಸೋದ್ರಿಂದ ಇರುವೆಗಳು ದೂರ ಇರುತ್ತವೆ. ಸೊಳ್ಳೆಗಳ ವಿಷಯದಲ್ಲಿ ಸಾಸಿವೆ ಪುಡಿ, ಕರ್ಪೂರದ ಪುಡಿ ಮತ್ತು ದಾಲ್ಚಿನ್ನಿ ತುಂಡುಗಳನ್ನು ಎಣ್ಣೆಯಲ್ಲಿ ಬೆರೆಸಿ ದೀಪ ಹಚ್ಚಿದರೆ ಸೊಳ್ಳೆಗಳು ಹತ್ತಿರ ಬರಲ್ಲ. ಮಳೆಗಾಲದಲ್ಲಿ ಬಟ್ಟೆ ಮತ್ತು ಪುಸ್ತಕದ ಕಪಾಟುಗಳು ಒದ್ದೆಯಾಗಿ ಕೆಟ್ಟ ವಾಸನೆ ಬರುತ್ತವೆ. ಅಂಥ ಸಂದರ್ಭದಲ್ಲಿ ಒಂದು ಸಣ್ಣ ಬಟ್ಟಲಿನಲ್ಲಿ ಕರ್ಪೂರ ಪುಡಿ ಮತ್ತು ಅಕ್ಕಿಯನ್ನು ಬೆರೆಸಿದರೆ ಅದು ತೇವಾಂಶ ಹೀರಿಕೊಳ್ಳುತ್ತದೆ. ಕರ್ಪೂರ ಎಲೆಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಬಟ್ಟೆಗಳ ನಡುವೆ ಇಟ್ಟರೆ, ಕೀಟಗಳು ಅವುಗಳನ್ನು ತಲುಪಲು ಸಾಧ್ಯವಾಗುವುದಿಲ್ಲ. ಕರ್ಪೂರ ಬೇಗನೆ ಆವಿಯಾಗುವುದನ್ನು ತಡೆಯಲು ಬಟ್ಟಲಿಗೆ ಸ್ವಲ್ಪ ಮೆಣಸು ಸೇರಿಸಿ.
