ಉದಯವಾಹಿನಿ, ಕೋಲಾರ: ಮತದಾನದ ವೇಳೆ ಹೃದಯಾಘಾತಕ್ಕೊಳಗಾಗಿ ವೃದ್ಧ ಸಾವನ್ನಪ್ಪಿದ ಘಟನೆ ಕೋಲಾರದಲ್ಲಿ ನಡೆದಿದೆ.
ಬಂಗಾರಪೇಟೆ ಟಿಎಪಿಸಿಎಂಎಸ್ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ ವೇಳೆ ಘಟನೆ ನಡೆದಿದೆ. ಬಂಗಾರಪೇಟೆ ತಾಲೂಕಿನ ಕಣಿಂಬೆಲೆ ಹೂಗಳ ಸೀನಪ್ಪ (86) ಹೃದಯಾಘಾತದಿಂದ ಮೃತಪಟ್ಟ ವೃದ್ಧ. ಬಿ ವರ್ಗದ 8ರ ಪೈಕಿ ಎರಡು ಮತದಾನ ಮಾಡಿದ್ದ ಸೀನಪ್ಪ, ಇನ್ನೂ 6 ಮತ ಮಾಡಲು ಪಕ್ಕದ ಮತಗಟ್ಟೆಗೆ ತೆರಳಿದ್ದ ವೇಳೆ ಮತಗಟ್ಟೆ ಬಳಿಯೇ ಹೃದಯಾಘಾತವಾಗಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಮಾದರಿ ಕನ್ನಡ ಶಾಲೆಯಲ್ಲಿ ಮತದಾನ ಮಾಡುತ್ತಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ಸೀನಪ್ಪ ಮೃತಪಟ್ಟಿದ್ದಾರೆ. ಸೀನಪ್ಪ ಸಿಪಿಐ ಅಂಜನಪ್ಪ ಸೇರಿ ಮೂವರು ಮಕ್ಕಳನ್ನ ಅಗಲಿದ್ದಾರೆ.
