ಉದಯವಾಹಿನಿ, ಬೆಂಗಳೂರು: ಆರ್‌ಎಸ್‌ಎಸ್‌ನವರು ಅತಿರೇಕ ಮಾಡೋದು ಬಿಡಬೇಕು. ಮೊದಲು ಹೇಗೆ ಕೆಲಸ ಮಾಡಿಕೊಂಡು ಹೋಗುತ್ತಿದ್ದರೋ ಹಾಗೇ ಆರ್‌ಎಸ್‌ಎಸ್‌ನವರು ಕೆಲಸ ಮಾಡಿಕೊಂಡು ಹೋಗಬೇಕು ಅಂತ ಕಾಂಗ್ರೆಸ್ ಶಾಸಕ ಬೇಳೂರು ಗೋಪಾಲಕೃಷ್ಣ ಆರ್‌ಎಸ್‌ಎಸ್ ವಿರುದ್ಧ ಕಿಡಿಕಾರಿದ್ದಾರೆ.
ಆರ್‌ಎಸ್‌ಎಸ್ ಕಾರ್ಯಚಟುವಟಿಕೆಗಳನ್ನು ಬ್ಯಾನ್ ಮಾಡಬೇಕು ಎಂಬ ಪ್ರಿಯಾಂಕ್ ಖರ್ಗೆ ಪತ್ರ ವಿಚಾರ ಮತ್ತು ಪ್ರಿಯಾಂಕ್ ಖರ್ಗೆಗೆ ಬೆದರಿಕೆ ಕರೆ ಬಂದಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಆರ್‌ಎಸ್‌ಎಸ್‌ಗೆ ನಿಷೇಧ ಹಾಕಬೇಕು ಎಂಬ ಖರ್ಗೆ ಹೇಳಿಕೆ ಅದು ಅವರ ವೈಯಕ್ತಿಕ ಅಭಿಪ್ರಾಯ.
ಆರ್‌ಎಸ್‌ಎಸ್ ಅವರು ಹಿಂದೆ ಇಂದ ತತ್ವ ಸಿದ್ಧಾಂತ ಇಟ್ಟುಕೊಂಡಿದ್ದಾರೆ. ಆರ್‌ಎಸ್‌ಎಸ್ ಅವರು ಬೆದರಿಕೆ ಕೊಡೋದು ಬಿಡಬೇಕು. ಎಲ್ಲಾ ಧರ್ಮ ಒಟ್ಟಾಗಿ ತೆಗೆದುಕೊಂಡು ಹೋಗೋದು ಸರ್ಕಾರದ ಕೆಲಸ. ಖರ್ಗೆ ಹೆದರೋ ಅವಶ್ಯಕತೆ ಇಲ್ಲ. ನಮ್ಮದೇ ಸರ್ಕಾರ ಇದೆ. ಬೆದರಿಕೆ ಹಾಕೋರ ಮೇಲೆ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದರು.
