ಉದಯವಾಹಿನಿ, ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಹಾಗೂ ಜೂನಿಯರ್ ಲೆವೆಲ್ ಕ್ರಿಕೆಟ್‌ನಲ್ಲಿ ವೈಭವ್ ಸೂರ್ಯವಂಶಿ ದೊಡ್ಡ ಹೆಸರು ಮಾಡಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಕಳೆದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಐಪಿಎಲ್ ಇತಿಹಾಸ ಎರಡನೇ ವೇಗದ ಶತಕವನ್ನು ಬಾರಿಸಿದ್ದರು. ಆ ಮೂಲಕ ರಾಜಸ್ಥಾನ್ ರಾಯಲ್ಸ್ ನೀಡಿದ್ದ 1.1 ಕೋಟಿ ರೂ. ಗಳ ಮೊತ್ತಕ್ಕೆ ಮೌಲ್ಯವನ್ನು ತಂದುಕೊಟ್ಟಿದ್ದರು. ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಈ ಸಾಧನೆಗೆ ಭಾಜನರಾಗಿದ್ದರು. ಇತ್ತೀಚೆಗೆ ಇಂಗ್ಲೆಂಡ್ ಅಂಡರ್-19 ತಂಡದ ವಿರುದ್ಧ ಕೇವಲ 78 ಎಸೆತಗಳಲ್ಲಿ 143 ರನ್‌ಗಳನ್ನು ಬಾರಿಸಿದ್ದರು ಹಾಗೂ ಆಸ್ಟ್ರೇಲಿಯಾ ವಿರುದ್ಧ ಅಂಡರ್-19 ಮೊದಲ ಯೂಥ್ ಟೆಸ್ಟ್‌ನಲ್ಲಿಯೂ 62 ಎಸೆತಗಳಲ್ಲಿ 104 ರನ್‌ಗಳನ್ನು ಸಿಡಿಸಿದ್ದರು.
ಕಳೆದ ಏಪ್ರಿಲ್ 28 ರಂದು ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ತಮ್ಮ ಬ್ಯಾಟಿಂಗ್‌ನಲ್ಲಿ ಅಬ್ಬರಿಸಿದ್ದರು. ಅವರು ಅಂದು ಆಡಿದದ ಕೇವಲ 35 ಎಸೆತಗಳಲ್ಲಿ ಶತಕವನ್ನು ಬಾರಿಸಿದ್ದರು. ತಮ್ಮ ಈ ದಾಖಲೆ ಇನಿಂಗ್ಸ್‌ನಲ್ಲಿ ಬರೋಬ್ಬರಿ 11 ಸಿಕ್ಸರ್ ಹಾಗೂ 7 ಬೌಂಡರಿಗಳನ್ನು ಬಾರಿಸಿದ್ದರು. ಈ ಪಂದ್ಯದಲ್ಲಿ ಸ್ಟಾರ್ ವೇಗಿಗಳಾದ ಮೊಹಮ್ಮದ್ ಸಿರಾಜ್ ಹಾಗೂ ಇಶಾಂತ್ ಶರ್ಮಾ ಅವರಂಥ ಅನುಭವಿ ಬೌಲರ್‌ಗಳಿಗೆ ಬೆವರಿಳಿಸಿದ್ದರು. ಅಂದು ಆಸ್ಟ್ರೇಲಿಯಾ ಮಾಜಿ ಆರಂಭಿಕ ಮ್ಯಾಥ್ಯೂ ಹೇಡನ್ ಅವರು,ವೈಭವ್ ಸೂರ್ಯವಂಶಿಗೆ ಇನ್ನೂ 14 ವರ್ಷ ಎಂದು ನಂಬಿರಲಿಲ್ಲ ಎಂಬ ಸಂಗತಿಯನ್ನು ಟೀಮ್ ಇಂಡಿಯಾ ಹೆಡ್ ಕೋಚ್ ರವಿ ಶಾಸ್ತ್ರಿ ರಿವೀಲ್ ಮಾಡಿದ್ದಾರೆ.
ನನಗೆ ಆಶ್ಚರ್ಯವಾಯಿತು; ಜೈಪುರದಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ನಾನು ಕಾಮೆಂಟರಿ ಮಾಡುತ್ತಿದ್ದೆ. 4ನೇ ಓವರ್‌ನಲ್ಲಿ ನಾನು ಕಾಮೆಂಟರಿಗೆ ಬಂದೆ ಮತ್ತು ಆ ಹೊತ್ತಿಗೆ ನಮ್ಮಲ್ಲಿ ಒಬ್ಬ ಕಾಮೆಂಟೇಟರ್ ಕಡಿಮೆ ಇದ್ದ ಕಾರಣ ನಾನು ಸತತವಾಗಿ ಎರಡು ಬಾರಿ ಪ್ರದರ್ಶನ ನೀಡಿದ್ದೇನೆ. 9ನೇ, 10ನೇ ಓವರ್‌ನ ಹೊತ್ತಿಗೆ ಅವರು 100 ರನ್ ಗಳಿಸಿದ್ದರು ಮತ್ತು ಅವರು ಚೆಂಡನ್ನು ಮೂಲೆ ಮೂಲೆಗೆ ಹೊಡೆದಿದ್ದರು. ಅವರು ಮೊಹಮ್ಮದ್ ಸಿರಾಜ್ ಮತ್ತು ಇಶಾಂತ್ ಶರ್ಮಾ ಅವರ ಬೌಲಿಂಗ್‌ನಲ್ಲಿ ಎಕ್ಸ್‌ಟ್ರಾ ಕವರ್ ಮತ್ತು ಮಿಡ್‌ವಿಕೆಟ್‌ನಲ್ಲಿ ಸತತವಾಗಿ 10 ಬಾರಿ ಹೊಡೆಯುತ್ತಿದ್ದರು. ಮ್ಯಾಥ್ಯೂ ಹೇಡನ್ ಕೂಡ ಅಲ್ಲಿದ್ದರು ಮತ್ತು ಅವರು ‘ಓಹ್ ಅವರಿಗೆ 14 ವರ್ಷ ವಯಸ್ಸಾಗಿರಲು ಸಾಧ್ಯವಿಲ್ಲ’ ಎಂದು ಹೇಳಿದ್ದರು. ನಾನು ‘ಬನ್ನಿ, ಶಾಂತವಾಗಿರಿ’ ಎಂದು ಹೇಳಿದೆ,” ಎಂದು ರವಿ ಶಾಸ್ತ್ರಿ ಪಾಡ್‌ಕ್ಯಾಸ್ಟ್‌ವೊಂದರಲ್ಲಿ ತಿಳಿಸಿದ್ದಾರೆ.
