ಉದಯವಾಹಿನಿ, ರಾಜ್‌ಕೋಟ್‌:  ನಿರಂಜನ್‌ ಶಾ ಮೈದಾನದಲ್ಲಿ ನಡಯುತ್ತಿರುವ 2025-26ರ ಸಾಲಿನ ರಣಜಿ ಟ್ರೋಫಿ (Ranji Trophy 2025-26) ಟೂರ್ನಿಯ ಎಲೈಟ್‌ ಬಿ ಗುಂಪಿನ ಪಂದ್ಯದಲ್ಲಿ ಕರ್ನಾಟಕ ಹಾಗೂ ಸೌರಾಷ್ಟ್ರ (KAR vs SAU) ತಂಡಗಳು ಕದಾಟ ನಡೆಸುತ್ತಿವೆ. ಶ್ರೇಯಸ್‌ ಗೋಪಾಲ್‌ (Shreyas Iyer) ಅವರ ಸ್ಪಿನ್‌ ಮೋಡಿಯ ಬಲದಿಂದ ಕರ್ನಾಟಕ ತಂಡ ಪಂದ್ಯದ ಎರಡನೇ ದಿನವೂ ಮೇಲುಗೈ ಸಾಧಿಸಿದೆ. ಕರ್ನಾಟಕ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 117.3 ಓವರ್‌ಗಳಿಗೆ 372 ರನ್‌ಗಳಿಗೆ ಆಲ್‌ಔಟ್‌ ಆಯಿತು. ಬಳಿಕ ಪ್ರಥಮ ಇನಿಂಗ್ಸ್‌ ಆರಂಭಿಸಿದ ಆತಿಥೇಯ ಸೌರಾಷ್ಟ್ರ ತಂಡ, ಎರಡನೇ ದಿನದಾಟದ ಅಂತ್ಯಕ್ಕೆ 60 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 200 ರನ್‌ಗಳನ್ನು ಗಳಿಸಿದೆ. ಆ ಮೂಲಕ ಇನ್ನೂ 172 ರನ್‌ಗಳ ಹಿನ್ನಡೆಯಲ್ಲಿದೆ.

ಗುರುವಾರ ಬೆಳಿಗ್ಗೆ 5 ವಿಕೆಟ್‌ ಕಳೆದುಕೊಂಡು 295 ರನ್‌ಗಳಿಂದ ಎರಡನೇ ದಿನದಾಟವನ್ನು ಆರಂಭಿಸಿದ ಕರ್ನಾಟಕ ತಂಡದ ಪರ ಕ್ರೀಸ್‌ಗೆ ಬಂದ ಆರ್‌ ಸ್ಮರಣ್‌ ಹಾಗೂ ಶ್ರೇಯಸ್‌ ಗೋಪಾಲ್‌ ಜೋಡಿ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಸಮಯವನ್ನು ಕಳೆಯಲಿಲ್ಲ. ಮೊದಲನೇ ದಿನ 66 ರನ್‌ ಗಳಿಸಿದ್ದ ಸ್ಮರಣ್‌, ಎರಡನೇ ದಿನ ಕೇವಲ 10 ರನ್‌ ಗಳಿಸಿ ಧರ್ಮೇಂದ್ರ ಸಿನ್ಹ್‌ ಜಡೇಜಾಗೆ ವಿಕೆಟ್‌ ಒಪ್ಪಿಸಿದರು. ನಂತರ ಕ್ರೀಸ್‌ಗೆ ಬಂದಿದ್ದ ಎಂ ವೆಂಕಟೇಶ್‌ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದರು. ನಂತರ 95 ಎಸೆತಗಳಲ್ಲಿ 56 ರನ್‌ಗಳಿಸಿ ಆಡುತ್ತಿದ್ದ ಶ್ರೇಯಸ್‌ ಗೋಪಾಲ್‌ ಕೂಡ ಔಟ್‌ ಆದರು. ಕರ್ನಾಟಕ ತಂಡದ ಮೊತ್ತ 324 ರನ್‌ಗಳು ಇರುವಾಗಲೇ ಈ ಮೂರೂ ವಿಕೆಟ್‌ಗಳನ್ನು ಕಳೆದುಕೊಂಡಿತು.

Leave a Reply

Your email address will not be published. Required fields are marked *

error: Content is protected !!