ಉದಯವಾಹಿನಿ, ಬ್ರೆಜಿಲಿಯಾ: ಶರ್ಟ್ ಧರಿಸದ ಬ್ರೆಜಿಲಿಯನ್ ಪಾದ್ರಿಯೊಬ್ಬ ಯುವತಿಯೊಬ್ಬಳನ್ನು ಸ್ನಾನಗೃಹದ ಅಡಿಯಲ್ಲಿ ಬಚ್ಚಿಟ್ಟು ಸಿಕ್ಕಿಬಿದ್ದಿದ್ದಾನೆ. ಬ್ರೆಜಿಲ್‌ನಲ್ಲಿ ಈ ಘಟನೆ ನಡೆದಿದೆ. ಪುರುಷರ ಗುಂಪೊಂದು ಅಪರೆಸಿಡಾದ ಅವರ್ ಲೇಡಿ ಚರ್ಚ್‌ಗೆ ನುಗ್ಗಿದಾಗ ಈ ವಿಷಯ ಬೆಳಕಿಗೆ ಬಂದಿದೆ. ಆ ಗುಂಪಿನಲ್ಲಿದ್ದ ಒಬ್ಬಾತನ ಭಾವಿ ಪತ್ನಿಯಾಗಿದ್ದ ಆಕೆಯು ಪಾದ್ರಿ ಮನೆಯಲ್ಲಿ ಬಚ್ಚಿಟ್ಟುಕೊಂಡು ಸಿಕ್ಕಿಬಿದ್ದಿದ್ದಾಳೆ. ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ) ಆಗಿದೆ.
ಈ ಘಟನೆ ಅಕ್ಟೋಬರ್ 13ರಂದು ಬೊಲಿವಿಯನ್‌ನಿಂದ ಸುಮಾರು 300 ಮೈಲು ದೂರದ ಮ್ಯಾಟೊ ಗ್ರೊಸೊ ರಾಜ್ಯದ ನೋವಾ ಮರಿಂಗಾ ಪಟ್ಟಣದಲ್ಲಿ ನಡೆದಿದೆ. ರೆವರೆಂಡ್ ಲೂಸಿಯಾನೊ ಬ್ರಾಗಾ ಸಿಂಪ್ಲಿಸಿಯೊ ಎಂಬ ಪಾದ್ರಿಯ ನಿವಾಸಕ್ಕೆ ಏಕಾಏಕಿ ವರನ ನೇತೃತ್ವದ ಗುಂಪೊಂದು ನುಗ್ಗಿದೆ. ಸಿಂಪ್ಲಿಸಿಯೊ ನಿವಾಸದಲ್ಲಿ ಸಿಕ್ಕಿಬಿದ್ದ ಯುವತಿಯ ನಿಶ್ಚಿತಾರ್ಥವನ್ನು ಪಟ್ಟಣದಿಂದ ಹೊರಗೆ ಆಯೋಜಿಸಲಾಗಿತ್ತು. ಮುಂಜಾನೆ ಚರ್ಚ್ ಪಕ್ಕದಲ್ಲಿರುವ ತನ್ನ ಮನೆಗೆ ಪಾದ್ರಿಯು ಆ ವಧುವನ್ನು ಕರೆದೊಯ್ದಿದ್ದಾನೆ.
ವಧುವು ಪಾದ್ರಿಯ ನಿವಾಸದಲ್ಲಿದ್ದಾಳೆ ಎಂಬ ಖಚಿತ ಮಾಹಿತಿ ಮೇರೆಗೆ ಈ ಗುಂಪು ದಾಳಿ ನಡೆಸಿದೆ. ಯುವತಿಯನ್ನು ಹುಡುಕಲು ನಿವಾಸವನ್ನೆಲ್ಲಾ ಜಾಲಾಡಲಾಯಿತು. ಕೂಡಲೇ ಸ್ನಾನಗೃಹದ ಬಳಿಗೆ ಹೋದಾಗ ಅಲ್ಲಿ ಬಾಗಿಲು ಒಳಗಿನಿಂದ ಲಾಕ್ ಆಗಿತ್ತು. ಬಾಗಿಲನ್ನು ಎಷ್ಟೇ ತಟ್ಟಿದರೂ ಯಾರೂ ತೆರೆಯಲಿಲ್ಲ. ಇದರಿಂದ ಕೋಪಗೊಂಡ ವರನು ಸ್ಟೂಲ್ ಅನ್ನು ಹಿಡಿದು ಬೀಗ ಹಾಕಿದ ಬಾತ್‍ರೂಂಗೆ ನುಗ್ಗಿದ್ದಾನೆ. ನಂತರ ಮುಚ್ಚಿದ ಬಾಗಿಲನ್ನು ಒಡೆದಿದ್ದಾನೆ.
