ಉದಯವಾಹಿನಿ, ಮ್ಯೂಟಂಟ್‌ ರಘುಗೆ ಬಿಗ್‌ ಬಾಸ್‌ ಸರ್ಪ್ರೈಸ್‌ ಗಿಫ್ಟ್‌ ಕೊಟ್ಟಿದ್ದಾರೆ. ಬಿಗ್‌ ಬಾಸ್‌ ಸರ್ಪ್ರೈಸ್‌ಗೆ ರಘು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಈ ಸುಂದರ ಘಳಿಗೆ ನನ್ನ ಜೀವನದಲ್ಲಿ ತುಂಬಾ ವಿಶೇಷ ಅಂತ ಹೇಳಿಕೊಂಡಿದ್ದಾರೆ. ಈ ವಾರ ಬಿಗ್‌ ಬಾಸ್‌ ಮನೆ ಫ್ಯಾಮಿಲಿ ವೀಕ್‌ ಆಗಿ ಮಾರ್ಪಟ್ಟಿದೆ. ಎಲ್ಲಾ ಸ್ಪರ್ಧಿಗಳ ಕುಟುಂಬದವರು ದೊಡ್ಮನೆಗೆ ಬಂದು ತಮ್ಮವರ ಜೊತೆ ಸುಂದರ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಮನೆಯಲ್ಲಿ ಪ್ರೀತಿ-ವಾತ್ಸಲ್ಯ-ಭಾವುಕತೆ-ಸಂತಸದ ಭಾವ ಕಂಡುಬರುತ್ತಿದೆ. ಅಂತೆಯೇ, ಬಿಗ್‌ ಬಾಸ್‌ ಮನೆಗೆ ರಘು ಕುಟುಂಬಸ್ಥರ ಎಂಟ್ರಿಯಾಗಿದೆ. ಇದರ ಪ್ರೋಮೊವನ್ನು ಕಲರ್ಸ್‌ ಕನ್ನಡ ವಾಹಿನಿ ಸೋಷಿಯಲ್‌ ಮೀಡಿಯಾದಲ್ಲಿ ರಿಲೀಸ್‌ ಮಾಡಿದೆ.
ರಘುಗೆ ಅವರ ಪತ್ನಿ ಗ್ರೀಷ್ಮ ಬರ್ತ್‌ಡೇ ದಿನವೇ ಮನೆಗೆ ಅವರನ್ನು ಬಿಗ್‌ ಬಾಸ್‌ ಕರೆಸಿದ್ದಾರೆ. ‘ನನ್‌ ಬರ್ತ್‌ಡೇ ಇವತ್ತು’ ಅಂತ ರಘು ಪತ್ನಿ ಹೇಳ್ತಾರೆ. ಅದಕ್ಕೆ, ಗೊತ್ತು ಅನ್ನುತ್ತಾರೆ ರಘು. ‘ಮತ್ತೆ ವಿಶ್‌ ಮಾಡು.. ಅಳ್ತ ಇದ್ದೀಯಲ್ಲ’ ಅಂತ ಗ್ರೀಷ್ಮ ಅವರು ಹೇಳ್ತಾರೆ. ಪತ್ನಿಯನ್ನು ಅಪ್ಪಿಕೊಂಡು ರಘು ವಿಶ್‌ ಮಾಡ್ತಾರೆ. ನಂತರ ಎಲ್ಲರ ಜೊತೆಗೆ ರಘು ಅವರು ತಮ್ಮ ಪತ್ನಿಯ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಈ ಸಂಭ್ರಮದಲ್ಲಿ ರಘು ಅವರ ಪುತ್ರ ಕೂಡ ಇದ್ದಾರೆ.

Leave a Reply

Your email address will not be published. Required fields are marked *

error: Content is protected !!