ಉದಯವಾಹಿನಿ,ನವದೆಹಲಿ: ಭಾರತೀಯ ವಿಮಾನಗಳ ಮೇಲಿನ ತನ್ನ ವಾಯುಪ್ರದೇಶ (Airspace) ನಿರ್ಬಂಧವನ್ನು ಪಾಕಿಸ್ತಾನ ನವೆಂಬರ್ 23ರವರೆಗೆ ವಿಸ್ತರಿಸಿದ್ದು, ಭಾರತ-ಪಾಕ್ ನಡುವೆ ವಾಯುಯಾನ ಮತ್ತು ರಾಜತಾಂತ್ರಿಕ ಬಿಕ್ಕಟ್ಟಿನ ಮತ್ತೊಂದು ಅಧ್ಯಾಯ ಶುರುವಾದಂತಾಗಿದೆ. ಪಾಕಿಸ್ತಾನ ಏವಿಯೇಶನ್ ಅಥಾರಿಟಿ (Pakistan ಈ ನಿರ್ಬಂಧವನ್ನು ದೃಢೀಕರಿಸುವ ಹೊಸ ನೋಟಿಸ್ ಟು ಏರ್‌ಮೆನ್ ಅನ್ನು ಹೊರಡಿಸಿದೆ. ಇದು ಎಲ್ಲ ಭಾರತೀಯ ನಾಗರಿಕ ಹಾಗೂ ಸೈನಿಕ ವಿಮಾನಗಳಿಗೆ ಅನ್ವಯಿಸುತ್ತದೆ.26 ಜನರನ್ನು ಬಲಿ ಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಏಪ್ರಿಲ್ 23ರಿಂದ ಎರಡೂ ದೇಶಗಳು ಪರಸ್ಪರ ವಿಮಾನಗಳಿಗೆ ತಮ್ಮ ವಾಯುಪ್ರದೇಶವನ್ನು ಬಂದ್ ಮಾಡಿಕೊಂಡಿವೆ. ಈ ಕ್ರಮದಿಂದಾಗಿ ಪ್ರಮುಖ ಅಂತರರಾಷ್ಟ್ರೀಯ ವಿಮಾನ ಮಾರ್ಗಗಳಿಗೆ ಅಡ್ಡಿ ಉಂಟಾಗಿದ್ದು, ಭಾರತ(India), ಮಧ್ಯಪ್ರಾಚ್ಯ , ಯುರೋಪ್(Europe) ಮತ್ತು ಅಮೆರಿಕ (United States) ನಡುವೆ ಕಾರ್ಯನಿರ್ವಹಿಸುವ ವಿಮಾನಯಾನ ಸಂಸ್ಥೆಗಳ ವೆಚ್ಚವನ್ನು ಹೆಚ್ಚಿಸಿದೆ.
NOTAM ಇದು ವಿಮಾನಯಾನಕ್ಕೆ ಸಂಬಂಧಿತ ನಿರ್ಣಾಯಕ ಬದಲಾವಣೆಗಳನ್ನು ವಿಮಾನಯಾನ ಸಂಸ್ಥೆಗಳಿಗೆ ತಿಳಿಸಲು ಜಾಗತಿಕವಾಗಿ ಬಳಸಲಾಗುವ ಪ್ರಮಾಣಿತ ಸಂವಹನ. ಇದೀಗ ಪಾಕಿಸ್ತಾನ ಹೊರಡಿಸಿರುವ ಈ NOTAM, ಇನ್ನೂ ಒಂದು ತಿಂಗಳವರೆಗೆ ಭಾರತೀಯ ವಿಮಾನಗಳ ಹಾರಾಟಕ್ಕೆ ತನ್ನ ವಾಯುಪ್ರದೇಶ ಮುಚ್ಚಲ್ಪಟ್ಟಿರುತ್ತದೆ ಎಂಬುದನ್ನು ಸೂಚಿಸುತ್ತದೆ. ಏಪ್ರಿಲ್ 23ರಿಂದ ಆರಂಭವಾದ ಈ ವಾಯುಪ್ರದೇಶ ನಿರ್ಬಂಧ ಕ್ರಮವನ್ನು
