ಉದಯವಾಹಿನಿ, ಕೀವ್ : ರಷ್ಯದ ಜೊತೆಗಿನ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ನವೀಕೃತ 20 ಅಂಶಗಳ ಶಾಂತಿ ಪ್ರಸ್ತಾಪವನ್ನು ಉಕ್ರೇನ್‌ ಅಧ್ಯಕ್ಷ ವೊಲೊದೊಮಿರ್‌ ಝಲೆನ್‌ ಮುಂದಿರಿಸಿದ್ದು ರಷ್ಯದ ಪಡೆಗಳನ್ನು ಹಿಂದಕ್ಕೆ ಕರೆಸಿಕೊಂಡರೆ ಡೊನ್ವಾಸ್‌ ಪ್ರಾಂತವನ್ನು ಸೇನಾ ರಹಿತ ವಲಯವೆಂದು ಗುರುತಿಸಲು ಸಿದ್ಧ ಎಂದು ಹೇಳಿದ್ದಾರೆ. ಫ್ಲೋರಿಡಾದಲ್ಲಿ ಅಮೆರಿಕಾ ಮತ್ತು ಉಕ್ರೇನ್ ನಿಯೋಗಗಳ ನಡುವಿನ ಮಾತುಕತೆಯಲ್ಲಿ ಈ ಯೋಜನೆಯನ್ನು ಅಂತಿಮಗೊಳಿಸಲಾಗಿದ್ದು ಇದೀಗ ರಶ್ಯದ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ. ಅಮೆರಿಕಾದೊಂದಿಗೆ ಮಾತುಕತೆ ನಡೆಸಿದ ಬಳಿಕ ರಶ್ಯ ಅಧಿಕೃತವಾಗಿ ಪ್ರತಿಕ್ರಿಯಿಸುವ ನಿರೀಕ್ಷೆಯಿದೆ ಎಂದವರು ಹೇಳಿದ್ದಾರೆ.

ಅಮೆರಿಕಾ, ನೇಟೊ ಮತ್ತು ಯುರೋಪಿಯನ್ ಮಿತ್ರರಿಂದ ಭದ್ರತೆಯ ಖಾತರಿಯನ್ನು ಉಕ್ರೇನ್ ಬಯಸಿದೆ. ಒಂದು ವೇಳೆ ರಶ್ಯ ಮತ್ತೊಮ್ಮೆ ಉಕ್ರೇನ್ ಮೇಲೆ ದಾಳಿ ನಡೆಸಿದರೆ ಶಾಂತಿ ಒಪ್ಪಂದದ ಪ್ರಕಾರ ಸಂಘಟಿತ ಪ್ರತಿಕ್ರಿಯೆಗೆ ಮಿತ್ರರಾಷ್ಟ್ರಗಳು ಬದ್ಧವಾಗಿರುತ್ತವೆ.
ಉಕ್ರೇನ್ ನ ಡೊನ್ವಾಸ್ ಪ್ರದೇಶಕ್ಕೆ ಸಂಬಂಧಿಸಿದ ವಿಷಯವು ಅತ್ಯಂತ ವಿವಾದಾತ್ಮಕವಾಗಿದೆ. ಪ್ರಸ್ತಾಪವು ಡೊನ್ಯಾಸ್ ನಲ್ಲಿ ಸೇನಾರಹಿತ ವಲಯ ಅಥವಾ ಮುಕ್ತ ಆರ್ಥಿಕ ವಲಯ ಎಂಬ ಎರಡು ಸಂಭಾವ್ಯ ಮಾರ್ಗಗಳನ್ನು ಪ್ರಸ್ತುತಪಡಿಸಿದೆ. ಇಲ್ಲಿಂದ ತನ್ನ ಪಡೆಗಳ ಸಂಪೂರ್ಣ ವಾಪಸಾತಿಯನ್ನು ಉಕ್ರೇನ್ ವಿರೋಧಿಸುತ್ತಿದ್ದು ಅಮೆರಿಕಾದ ನಿಯೋಗ ಭಾಗಶಃ ವಾಪಸಾತಿಯನ್ನು ಪ್ರಸ್ತಾಪಿಸಿದ್ದಾರೆ. ಉಕ್ರೇನಿಯನ್ ಪಡೆಗಳು ತೆರವುಗೊಳಿಸುವ ಯಾವುದೇ ಪ್ರದೇಶವು ಉಕ್ರೇನ್ ನ ಪೊಲೀಸ್ ವ್ಯವಸ್ಥೆಯಡಿ ಇರುತದೆ ಎಂಬುದು ಲೆನ್‌ಸಿ ವಾದವಾಗಿದೆ.

Leave a Reply

Your email address will not be published. Required fields are marked *

error: Content is protected !!