ಉದಯವಾಹಿನಿ, ಟಾಂಜಾನಿಯಾ: ಸ್ಥಿರವಾದ ಉದ್ಯೋಗವು ಅನೇಕರ ಕುಟುಂಬಗಳನ್ನು ಪೋಷಿಸಲು ಜೀವನಾಡಿಯಾಗಿದೆ. ಆದರೆ, ಉದ್ಯೋಗದ ಸ್ಥಳವು ವಿಷಕಾರಿಯಾದಾಗ ಅಸಹನೀಯವಾಗುತ್ತವೆ. ಬಾಸ್ (ಮೇಲಾಧಿಕಾರಿ) ಕಾರಣದಿಂದಾಗಿ, ನೌಕರರು ತಮ್ಮ ಕೆಲಸಗಳಿಗೆ ರಾಜೀನಾಮೆಗಳನ್ನು ನೀಡುತ್ತಾರೆ. ಇತ್ತೀಚೆಗೆ ವೈರಲ್ ಆಗಿರುವ ರಾಜೀನಾಮೆ ಪತ್ರವೊಂದು ಇದೇ ರೀತಿಯ ಪರಿಸ್ಥಿತಿಯನ್ನು ತೋರಿಸುತ್ತದೆ. ಈ ವೈರಲ್ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರ ಗಮನ ಸೆಳೆದಿದೆ.
ಜೇ ಡೆಕೋರ್ ಎಂಬುದು ಟಾಂಜಾನಿಯಾದಲ್ಲಿರುವ ಒಂದು ಕಂಪನಿಯಾಗಿದ್ದು, ಅದರ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ 100,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ. ಈ ಕಂಪನಿಯ ಉದ್ಯೋಗಿಯಾಗಿದ್ದ ಎಸಿ ಮಿಂಜಾ ಎಂಬುವವರು ತನ್ನ ಬಾಸ್ ಮತ್ತು ಕಂಪನಿಯ ನೀತಿಗಳಿಂದ ಹತಾಶೆಗೊಂಡು ರಾಜೀನಾಮೆ ನೀಡಿದ ಪತ್ರದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.

ಪತ್ರವು ಸಂಕ್ಷಿಪ್ತವಾಗಿದ್ದರೂ ಸ್ಪಷ್ಟವಾಗಿದೆ. ಅವರ ರಾಜೀನಾಮೆಗೆ ಕಾರಣವನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಈ ರಾಜೀನಾಮೆ ಪತ್ರ ಈಗ ವೈರಲ್ ಆಗಿದೆ. ಅದರಲ್ಲಿ ಅವರು ಹೀಗೆ ಬರೆದಿದ್ದಾರೆ: ಈ ಕಂಪನಿಯಲ್ಲಿ ಸಂಬಳ ಹೆಚ್ಚಳದ ಗುರಿ ಮಾತ್ರ ಇದೆ, ನಾನು ರಾಜೀನಾಮೆ ನೀಡುತ್ತಿದ್ದೇನೆ. ನಾನು ಕೆಲಸ ಮಾಡುತ್ತೇನೆ, ನಾನು ಮ್ಯಾಜಿಕ್ ಮಾಡುವುದಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ಆ ಪತ್ರವು ಕಂಪನಿಯ ಅಧಿಕೃತ ಮುದ್ರೆಯನ್ನು ಸಹ ಹೊಂದಿದೆ.

Leave a Reply

Your email address will not be published. Required fields are marked *

error: Content is protected !!