ಋತುಮಾನದ ಕಾಯಿಲೆಗಳನ್ನು ನಿವಾರಿಸಲು ಈ ಆಹಾರಗಳನ್ನು ಸೇವಿಸಿ

ಉದಯವಾಹಿನಿ, ಬೆಂಗಳೂರು: ಮಳೆ- ಬಿಸಿಲಿನ ವಾತಾವರಣದಿಂದಾಗಿ (Seasonal Diseases) ಹೆಚ್ಚಿನವರ ಆರೋಗ್ಯ ಕೆಡುತ್ತಿದೆ. ಈ ಬದಲಾವಣೆಯೂ ನಮ್ಮ ದೇಹದ ರೋಗನಿರೋಧಕ ಶಕ್ತಿ ಮತ್ತು ಜೀರ್ಣ ಕ್ರಿಯೆ ಎರಡರ ಮೇಲೂ ಹೆಚ್ಚಾಗಿ ಪರಿಣಾಮ ಬೀರುತ್ತದೆ. ಈ ಸಂದರ್ಭದಲ್ಲಿ ಸೋಂಕು, ಶೀತ ಜ್ವರ ಅಜೀರ್ಣದಂತಹ ಸಮಸ್ಯೆಗಳನ್ನು ನೀವು ಎದುರಿಸಬಹುದು.‌ ಹಾಗಾಗಿ ಇಂತಹ ಸಮಸ್ಯೆಯನ್ನು ತಡೆಗಟ್ಟಲು ನೀವು ಅಡುಗೆಮನೆಯಲ್ಲಿರುವ ಸರಳ ‘ದೇಸಿ’ ಆಹಾರಗಳು ಮತ್ತು ಮಸಾಲೆ ಪದಾರ್ಥ ಗಳನ್ನು ಬಳಸಬಹುದು.
ನಿಮ್ಮ ಅಡುಗೆ ಮನೆಯಲ್ಲಿ ಬಳಸುವ ಈ ವಸ್ತುಗಳು ಉರಿ‌ಯೂತವನ್ನು ನಿಯಂತ್ರಿಸಲು, ಕರುಳಿನ ಆರೋಗ್ಯವನ್ನು ಸುಧಾರಿಸಲು ಮತ್ತು ಸೋಂಕಿನಿಂದ ರಕ್ಷಿಸಲು ಸಹಾಯ ಮಾಡುತ್ತವೆ ಎಂದು ವೈಜ್ಞಾನಿಕ ಸಂಶೋಧನೆಗಳೂ ಕೂಡ ದೃಢಪಡಿಸಿವೆ. ಹಾಗಾಗಿ ಬದಲಾಗುತ್ತಿರುವ ಋತುಮಾನ ದಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುವ ಪ್ರಮುಖ ಆಹಾರಗಳ ವಿವರ ಇಲ್ಲಿದೆ:

​ಅರಿಶಿನ (Turmeric)
ಅರಿಶಿನವು ಮುಖ್ಯ ಸಕ್ರಿಯ ಸಂಯುಕ್ತವಾದ ಕರ್ಕ್ಯುಮಿನ್ ಉರಿಯೂತ ನಿವಾರಕ ಮತ್ತು ಆ್ಯಂಟಿ ವೈರಲ್ ಗುಣಗಳನ್ನು ಹೊಂದಿದೆ. ಹಾಗಾಗಿ ಬೆಚ್ಚಗಿನ ಅರಶಿನ ಹಾಲು ಸೇವಿಸುವುದು ಅಥವಾ ಅರಿಶಿನವನ್ನು ಪ್ರತಿದಿನ ಅಡುಗೆಗೆ ಬಳಸುವುದು ಉಸಿರಾಟದ ಸೋಂಕುಗಳ ವಿರುದ್ಧ ರಕ್ಷಣೆ ನೀಡುತ್ತದೆ. ಇದರಿಂದ ಜ್ವರ, ಕೆಮ್ಮು, ನೆಗಡಿ ಇತ್ಯಾದಿ ಸಮಸ್ಯೆ ದೂರ ಮಾಡಬಹುದು.

​ಶುಂಠಿ (Ginger)
ಶುಂಠಿಯು ಉತ್ಕರ್ಷಣ ನಿರೋಧಕ ಮತ್ತು ಉರಿಯೂತ ನಿವಾರಕ ಶಕ್ತಿಯನ್ನು‌ ಹೊಂದಿರುವ ಸಂಯುಕ್ತಗಳನ್ನು ಹೊಂದಿದೆ. ಇದು ಶೀತದ ಸಮಯದಲ್ಲಿ ಉಸಿರಾಟದ ಉರಿಯೂತವನ್ನು ಕಡಿಮೆ ಮಾಡಲು ಮತ್ತು ಜೀರ್ಣಕ್ರಿಯೆಗೆ ನೆರವಾಗುತ್ತದೆ. ನಿಂಬೆ ಮತ್ತು ಜೇನುತುಪ್ಪದೊಂದಿಗೆ ಶುಂಠಿ ಟೀ ಅತ್ಯುತ್ತಮ ಪರಿಹಾರ.

​ಬೆಳ್ಳುಳ್ಳಿ (Garlic)
ಶೀತಕ್ಕೆ ಹೆಚ್ಚಾಗಿ ಔಷಧವಾಗಿ ಬಳಸುವ ಬೆಳ್ಳುಳ್ಳಿ ಆ್ಯಂಟಿ ಬಯೋಟಿಕ್ ಅಂಶಗಳನ್ನು ಹೊಂದಿದೆ. ಬೆಳ್ಳುಳ್ಳಿಯನ್ನು ನಿಮ್ಮ ದೈನಂದಿನ ಅಡುಗೆಯಲ್ಲಿ ಸೇರಿಸುವುದರಿಂದ ಹೆಚ್ಚಿನ‌ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.

​ಜೇನುತುಪ್ಪ (Honey)
ಮಕ್ಕಳು ಮತ್ತು ವಯಸ್ಕರಲ್ಲಿ ರಾತ್ರಿ ಕಾಣಿಸಿಕೊಳ್ಳುವ ಕೆಮ್ಮನ್ನು ಕಡಿಮೆ ಮಾಡಿ, ಉತ್ತಮ ನಿದ್ರೆಗೆ ಜೇನುತುಪ್ಪ ಹೆಚ್ಚು ಸಹಾಯ ಮಾಡುತ್ತದೆ. ಇದು ಸುರಕ್ಷಿತ ಮನೆಮದ್ದು ಆಗಿದ್ದು ಇದನ್ನು ಬಳಸಿ ಕೊಳ್ಳುವ ಅಭ್ಯಾಸ ಮಾಡಿಕೊಳ್ಳಿ.

​ನಿಂಬೆ ಮತ್ತು ನೆಲ್ಲಿಕಾಯಿ (Citrus & Amla)
ವಿಟಮಿನ್ ಸಿಯ ಸಮೃದ್ಧ ಮೂಲಗಳಾಗಿರುವ ನೆಲ್ಲಿಕಾಯಿ ಮತ್ತು ನಿಂಬೆಯ ನಿಯಮಿತ ಸೇವನೆಯು ಶೀತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೆಲ್ಲಿಕಾಯಿಯನ್ನು ನಿಮ್ಮ ಆಹಾರದಲ್ಲಿ ಹೆಚ್ಚಾಗಿ ಬಳಸಿ.

​ಓಮ/ಅಜ್ವಾನ (Ajwain)
ಇದು ಹೊಟ್ಟೆ ಉಬ್ಬರ, ಗ್ಯಾಸ್ ಮತ್ತು ಅಜೀರ್ಣವನ್ನು ನಿವಾರಿಸಲು ಇದು ಹೆಸರುವಾಸಿ. ಇದರಲ್ಲಿರುವ ‘ಥೈಮೋಲ್’ ಅಂಶವು ಜೀರ್ಣಕ್ರಿಯೆ ಮತ್ತು ಕರುಳಿನ ಚಲನೆಯನ್ನು ಉತ್ತೇಜಿ ಸುತ್ತದೆ. ಚಹಾ ಅಥವಾ ಊಟದ ನಂತರ ಬಿಸಿ ಓಮದ ಕಷಾಯ ಆರೋಗ್ಯಕ್ಕೆ ಉತ್ತಮ

ಡೈರಿ ಉತ್ಪನ್ನಗಳು (Fermented Dairy)
ಮೊಸರು ಅಥವಾ ಮಜ್ಜಿಗೆಯು ಕರುಳಿನ ಆರೋಗ್ಯಕರ ಬ್ಯಾಕ್ಟೀರಿಯಾವನ್ನು ಪೂರೈಸುತ್ತದೆ. ಚಳಿಗಾಲದಲ್ಲಿ ಇದು ಜೀರ್ಣಾಂಗಕ್ಕೆ ಆರಾಮ ನೀಡುವುದಲ್ಲದೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

​ಇಡ್ಲಿ, ದೋಸೆ, ಹುದುಗಿಸಿದ ಉಪ್ಪಿನಕಾಯಿ (Idli, dosa, fermented pickles)
ದೀರ್ಘಾವಧಿಯ ಹುದುಗುವಿಕೆ ಆಹಾರ ಪದಾರ್ಥಗಳು ಕರುಳಿನ ಸೂಕ್ಷ್ಮಜೀವಿಗಳ (ಮೈಕ್ರೋ ಬಯೋಮ್) ಸ್ಥಿರತೆಯನ್ನು ಕಾಪಾಡುತ್ತವೆ. ಇದು ಸೋಂಕುಗಳು ಮತ್ತು ಜೀರ್ಣಾಂಗದ ತೊಂದರೆ ಗಳನ್ನು ವಿರೋಧಿಸಲು ಸಹಾಯ ಮಾಡುತ್ತದೆ.

​ಜೀರಿಗೆ (Jeera)
ಜೀರಿಗೆಯನ್ನು ಜೀರ್ಣಕ್ರಿಯೆಯ ನಿವಾರಣೆಗೆ ಹೆಚ್ಚಾಗಿ ಬಳಸುತ್ತಾರೆ. ಜೀರಿಗೆ ನೀರು ಕುಡಿಯುವುದು ಅಥವಾ ಇದನ್ನು ಅಡುಗೆಯಲ್ಲಿ ಬಳಸುವುದು ಜೀರ್ಣಕಾರಿ ಕಿಣ್ವಗಳ ಬಿಡುಗಡೆಗೆ ಸಹಾಯ ಮಾಡಿ ಆರೋಗ್ಯವನ್ನು ಸುಧಾರಿಸುತ್ತದೆ.

Leave a Reply

Your email address will not be published. Required fields are marked *

error: Content is protected !!