
ಉದಯವಾಹಿನಿ , ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೊತೆ ಸಂಬಂಧ ಹೊಂದಿದ್ದ ದರೋಡೆಕೋರ ಲಖ್ವಿಂದರ್ ಕುಮಾರ್ ನನ್ನು ಅಮೆರಿಕದಿಂದ ಗಡಿಪಾರು ಮಾಡಲಾಗಿದೆ. ಅಲ್ಲಿಂದ ಗಡಿಪಾರಾದ ಬಳಿಕ ದೆಹಲಿಗೆ ಆಗಮಿಸಿದ ಆತನನ್ನು ಹರಿಯಾಣ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸುಲಿಗೆ, ಬೆದರಿಕೆ, ಕೊಲೆ ಯತ್ನ, ದರೋಡೆ, ಅಕ್ರಮವಾಗಿ ಬಂದೂಕು ಹೊಂದಿರುವ ಆರೋಪ ಲಖ್ವಿಂದರ್ ಕುಮಾರ್ ಮೇಲಿದ್ದು, ಆತ ಹರಿಯಾಣ ಪೊಲೀಸರಿಗೆ ವಿವಿಧ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯಾಗಿದ್ದನು.
ಕೇಂದ್ರ ತನಿಖಾ ದಳ (ಸಿಬಿಐ), ವಿದೇಶಾಂಗ ಸಚಿವಾಲಯ (ಎಂಇಎ) ಮತ್ತು ಗೃಹ ಸಚಿವಾಲಯ (ಎಂಎಚ್‌ಎ) ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೊತೆ ಸಂಬಂಧ ಹೊಂದಿದ್ದ ದರೋಡೆಕೋರ ಲಖ್ವಿಂದರ್ ಕುಮಾರ್ ನನ್ನು ಅಮೆರಿಕದಿಂದ ಗಡಿಪಾರು ಮಾಡಲಾಗಿತ್ತು.
ಸುಲಿಗೆ, ಬೆದರಿಕೆ, ಕೊಲೆ ಯತ್ನ, ದರೋಡೆ, ಅಕ್ರಮವಾಗಿ ಬಂದೂಕು ಹೊಂದಿರುವ ಆರೋಪ ಲಖ್ವಿಂದರ್ ಕುಮಾರ್ ಮೇಲಿದ್ದು, ವಿವಿಧ ಪ್ರಕರಣಗಳಲ್ಲಿ ಆತ ಹರಿಯಾಣ ಪೊಲೀಸರಿಗೆ ಬೇಕಾಗಿದ್ದ ಆರೋಪಿಯಾಗಿದ್ದನು. ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೊತೆ ಸಂಬಂಧ ಹೊಂದಿದ್ದ ಲಖ್ವಿಂದರ್ ಕುರಿತಾಗಿ ಹರಿಯಾಣ ಪೊಲೀಸರ ಕೋರಿಕೆಯ ಮೇರೆಗೆ ಸಿಬಿಐ ಕಳೆದ ವರ್ಷ ಅಕ್ಟೋಬರ್ 26 ರಂದು ಇಂಟರ್‌ಪೋಲ್ ಮೂಲಕ ಪರಾರಿಯಾಗಿರುವ ಆತನ ವಿರುದ್ಧ ರೆಡ್ ನೋಟಿಸ್ ಜಾರಿ ಮಾಡಿತ್ತು.
