ಉದಯವಾಹಿನಿ , ಮ್ಯಾನ್ಮಾರ್ : ಭಯೋತ್ಪಾದನೆಗೆ ಹಣಕಾಸು ನೆರವು ಮತ್ತು ಹಣ ವರ್ಗಾವಣೆಯನ್ನು ವಿಶ್ವಾದ್ಯಂತ ಮೇಲ್ವಿಚಾರಣೆ ಮಾಡುವ ಜಾಗತಿಕ ಸಂಸ್ಥೆ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (FATF) ತನ್ನ ಇತ್ತೀಚಿನ ಪರಿಶೀಲನಾ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ ಉತ್ತರ ಕೊರಿಯಾ (North Korea), ಇರಾನ್ ( ಮತ್ತು ಮ್ಯಾನ್ಮಾರ್‌ನ್ನು ಮತ್ತೆ ʻಕಪ್ಪು ಪಟ್ಟಿಗೆʼ ಸೇರಿಸಲಾಗಿದೆ. ನೇಪಾಳ (Nepal) ಸೇರಿದಂತೆ 18 ದೇಶಗಳನ್ನು ʻಬೂದು ಪಟ್ಟಿʼಯಲ್ಲಿಯೇ ಉಳಿಸಿಕೊಳ್ಳಲಾಗಿದೆ.
ಕಪ್ಪು ಪಟ್ಟಿಯಲ್ಲಿರುವ ಮೂರು ದೇಶಗಳು ತಮ್ಮ ಹಣ ವರ್ಗಾವಣೆ ವಿರೋಧಿ ಮತ್ತು ಭಯೋತ್ಪಾದನಾ ನಿಗ್ರಹ ಹಣಕಾಸು ವ್ಯವಸ್ಥೆಗಳಲ್ಲಿ ಗಂಭೀರ ನ್ಯೂನತೆಗಳನ್ನು ಹೊಂದಿವೆ ಎಂದು FATF ಹೇಳಿದೆ. ಈ ದೇಶಗಳು ತಮ್ಮ ಬದ್ಧತೆಗಳನ್ನು ಪೂರೈಸುವಲ್ಲಿ ನಿರಂತರವಾಗಿ ವಿಫಲವಾಗಿವೆ. ಇದು ಅಂತರರಾಷ್ಟ್ರೀಯ ಹಣಕಾಸು ವ್ಯವಸ್ಥೆಗೆ ಅಪಾಯವನ್ನುಂಟುಮಾಡುತ್ತದೆ ಎಂದು ಎಚ್ಚರಿಸಿದೆ. ಅಕ್ಟೋಬರ್ 2022 ರಲ್ಲಿ ಮ್ಯಾನ್ಮಾರ್‌ನ್ನು ಕಪ್ಪುಪಟ್ಟಿಗೆ ಸೇರಿಸಲಾಗಿತ್ತು. ಇನ್ನೂ ಕ್ರಿಯಾ ಯೋಜನೆಯ ಅಂಶಗಳಲ್ಲಿ ಪ್ರಗತಿ ಸಾಧಿಸಿಲ್ಲ. ಅಕ್ಟೋಬರ್ 2025 ರೊಳಗೆ ಸುಧಾರಣೆಗಳನ್ನು ಮಾಡದಿದ್ದರೆ, ಹೆಚ್ಚು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವ ಬಗ್ಗೆ FATF ಎಚ್ಚರಿಸಿದೆ.
2018ರಲ್ಲಿ ಕೊನೆಗೊಂಡ ತನ್ನ ಕ್ರಿಯಾ ಯೋಜನೆಯನ್ನು ಇರಾನ್ ಇನ್ನೂ ಪೂರ್ಣಗೊಳಿಸಿಲ್ಲ. ಅಕ್ಟೋಬರ್ 2025 ರಲ್ಲಿ ಭಯೋತ್ಪಾದನೆಗೆ ಹಣಕಾಸು ಒದಗಿಸುವ ಬಗ್ಗೆ ವಿಶ್ವಸಂಸ್ಥೆಯ ಕಾನೂನನ್ನು ಅದು ಅನುಮೋದಿಸಿದೆ. ಆದರೂ ಹಲವಾರು ಪ್ರಮುಖ ನ್ಯೂನತೆಗಳು ಇನ್ನೂ ಉಳಿದಿವೆ ಎಂದು FATF ಹೇಳಿದೆ.

Leave a Reply

Your email address will not be published. Required fields are marked *

error: Content is protected !!