ಉದಯವಾಹಿನಿ, ನಟ ದರ್ಶನ್‌ಗೆ ಜೈಲಲ್ಲಿ ಹಾಸಿಗೆ ದಿಂಬು ನೀಡದ ವಿಚಾರ ಇನ್ನೂ ನಿಂತಿಲ್ಲ. ಕಾನೂನು ಸೇವಾ ಪ್ರಾಧಿಕಾರದ ಸೆಕ್ರೇಟರಿ ಪರಪ್ಪನ ಅಗ್ರಹಾರ ಜೈಲಲ್ಲಿ ಜೈಲು ಸಿಬ್ಬಂದಿಯ ಹೇಳಿಕೆಯನ್ನ ಪಡೆದಿದ್ದೇ ತಪ್ಪು ಅಂತಾ ದರ್ಶನ್ ಪರ ವಕೀಲರು ಇಂದು ಕೋರ್ಟ್‌ನಲ್ಲಿ ವಾದ ಮಾಡಿದ್ದಾರೆ.
ನಟ ದರ್ಶನ್‌ಗೆ ಇನ್ನೂ ಹಾಸಿಗೆ ದಿಂಬು ಸಿಕ್ಕಿಲ್ಲ. ಹೀಗಾಗಿ ಹಾಸಿಗೆ, ದಿಂಬು ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ 57ನೇ ಸಿಸಿಹೆಚ್ ಕೋರ್ಟ್‌ನಲ್ಲಿ ನಡೀತು. ವಿಚಾರಣೆಯಲ್ಲಿ ಕಾನೂನು ಸೇವಾ ಪ್ರಾಧಿಕಾರದ ವರದಿ ಮೇಲೆ ದರ್ಶನ್ ಪರ ವಕೀಲ ಸುನೀಲ್ ವಾದ ಮಂಡನೆ ಮಾಡಿದರು. ಜೈಲು ಅಧಿಕಾರಿಗಳು ಕಾನೂನು ಸೇವಾ ಪ್ರಾಧಿಕಾರದ ಸದಸ್ಯರನ್ನ ಮೀಸ್‌ಲೀಡ್ ಮಾಡಿದ್ದಾರೆ. ಆದೇಶದಲ್ಲಿ ಎಲ್ಲೂ ಜೈಲು ಅಧಿಕಾರಿಗಳಿಂದ ಮಾಹಿತಿ ಕೇಳಿ ಅಂತೇಳಿಲ್ಲ. ಗುಬ್ಬಚ್ಚಿ ಸೀನಾ ಬರ್ತ್‌ಡೆಯನ್ನು ಜೈಲಿನಲ್ಲಿ ಆಚರಣೆ ಮಾಡಿಕೊಂಡಿದ್ದಾರೆ. ಒಬ್ಬರಿಗೂ ಒಂದು ಕಾನೂನು ಮತ್ತೊಬ್ಬರಿಗೆ ಮತ್ತೊಂದು ಕಾನೂನು. ಕ್ವಾರಂಟೈನ್ ಸೆಲ್‌ನಿಂದ ಮೈನ್ ಸೆಲ್‌ಗೆ ಶಿಫ್ಟ್ ಮಾಡಿ, ನಾವು ಟ್ರಯಲ್‌ಗೆ ಸಿದ್ಧರಿದ್ದೇವೆ. ಒಂದೇ ದಿನದಲ್ಲಿ ಟ್ರಯಲ್ ನಡೆದು ಜೀವಾವಧಿ ಶಿಕ್ಷೆ ಬೇಕಿದ್ರೂ ವಿಧಿಸಿ ಎಂದು ವಾದಿಸಿದರು.
