ಉದಯವಾಹಿನಿ, ಜಿನೆವಾ : ಭಾರತದಲ್ಲಿ ಮಾರಣಾಂತಿಕ ನಿಫಾ ವೈರಸ್‌ನ ಎರಡು ಪ್ರಕರಣಗಳು ವರದಿಯಾದ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವ ಆರೋಗ್ಯ ಸಂಸ್ಥೆ ಇದು ದೇಶದ ಹೊರಗೆ ಹರಡುವ ಅಪಾಯ ಕಡಿಮೆ ಎಂದು ಹೇಳಿದ್ದು ಈ ಸಮಯದಲ್ಲಿ ಯಾವುದೇ ಪ್ರಯಾಣ ಅಥವಾ ವ್ಯಾಪಾರ ನಿರ್ಬಂಧಗಳನ್ನು ಶಿಫಾರಸು ಮಾಡಿಲ್ಲ.
ಭಾರತದಲ್ಲಿ ವರದಿಯಾದ ಪ್ರಕರಣಗಳಿಗೆ ಪ್ರತಿಕ್ರಿಯೆಯಾಗಿ ಹಾಂಕಾಂಗ್, ಮಲೇಶ್ಯಾ, ಸಿಂಗಾಪುರ, ಥೈಲ್ಯಾಂಡ್ ಮತ್ತು ವಿಯೆಟ್ನಾಮ್ ಸೇರಿದಂತೆ ಏಶ್ಯಾದ ಹಲವು ರಾಷ್ಟ್ರಗಳು ಯಾವುದೇ ಸಂಭಾವ್ಯ ಹರಡುವಿಕೆಯನ್ನು ತಡೆಗಟ್ಟಲು ವಿಮಾನ ನಿಲ್ದಾಣದ ಸ್ಟೀನಿಂಗ್ ಕಾರ್ಯವಿಧಾನಗಳನ್ನು ಹೆಚ್ಚಿಸಿವೆ.
