ಉದಯವಾಹಿನಿ,ಪಾಟ್ನಾ: ಲಾಲು ಪ್ರಸಾದ್‌ ಯಾದವ್ ಮತ್ತು ರಾಹುಲ್ ಗಾಂಧಿ ಒಳನುಸುಳುಕೋರರನ್ನು ರಕ್ಷಿಸಲು ಬಯಸುತ್ತಾರೆ. ಆದರೆ ಬಿಜೆಪಿ ಒಳನುಸುಳುಕೋರರನ್ನು ಒಬ್ಬೊಬ್ಬರಾಗಿ ಗುರುತಿಸಿ ದೇಶದಿಂದ ಹೊರಹಾಕುತ್ತದೆ ಎಂದು ಗೃಹ ಸಚಿವ ಅಮಿತ್ ಶಾ ಗುಡುಗಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಪ್ರಚಾರದ ಕೊನೆಯ ದಿನದಂದು, ಅಮಿತ್ ಶಾ ಅವರು ದರ್ಭಾಂಗಾದ ಜಲೇಯಲ್ಲಿ ನಡೆದ ಬೃಹತ್ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಬಿಹಾರವು ಈಗಾಗಲೇ ಲಾಲು ಪ್ರಸಾದ್ ಯಾದವ್ ಮತ್ತು ರಾಬ್ರಿ ದೇವಿ ನೇತೃತ್ವದಲ್ಲಿ 15 ವರ್ಷಗಳ ಜಂಗಲ್ ರಾಜ್ ಅನ್ನು ನೋಡಿದೆ. ಅದೇ ಮಾದರಿಯನ್ನು ಈಗ ಮತ್ತೆ ತರುವ ಯತ್ನ ನಡೆಯುತ್ತಿದೆ. ಜಂಗಲ್ ರಾಜ್‌ಗೆ ಮರಳುವುದನ್ನು ನಿಲ್ಲಿಸಿ ದರ್ಭಾಂಗಾವನ್ನು ಅಭಿವೃದ್ಧಿ ಹೊಂದಿದ ಜಿಲ್ಲೆಯನ್ನಾಗಿ ಮಾಡುವುದು ಎನ್‌ಡಿಎಯ ಆದ್ಯತೆ ಎಂದು ಹೇಳಿದರು.
ಲಾಲು ಯಾದವ್ ಮೇವು ಹಗರಣ, ಉದ್ಯೋಗಕ್ಕಾಗಿ ಭೂಮಿ ಹಗರಣ, ಹೋಟೆಲ್ ಮಾರಾಟ ಹಗರಣ, ಬಿಟುಮೆನ್ ಹಗರಣ, ಪ್ರವಾಹ ಪರಿಹಾರ ಹಗರಣ, ನೇಮಕಾತಿ ಹಗರಣದಲ್ಲಿ ಭಾಗಿಯಾಗಿದ್ದಾರೆ. ಕಾಂಗ್ರೆಸ್ ಸರ್ಕಾರವೂ 12 ಲಕ್ಷ ಕೋಟಿ ರೂ.ಗಳ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ. ಆದರೆ ಮೋದಿ ಸರ್ಕಾರ 11 ವರ್ಷ ಮತ್ತು ನಿತೀಶ್ ಕುಮಾರ್ 20 ವರ್ಷ ಆಡಳಿತ ನಡೆಸಿದ್ದರೂ, ಅವರ ವಿರುದ್ಧ ಯಾವುದೇ ಭ್ರಷ್ಟಾಚಾರ ಆರೋಪಗಳು ಕೇಳಿ ಬಂದಿಲ್ಲ ಎಂದು ಶಾ ಹೇಳಿದರು.

Leave a Reply

Your email address will not be published. Required fields are marked *

error: Content is protected !!