ಉದಯವಾಹಿನಿ, ರಾಕಿಂಗ್ ಸ್ಟಾರ್ ಯಶ್ ಹೊರತು ಪಡಿಸಿ ಟಾಕ್ಸಿಕ್ ಸಿನಿಮಾದ ತಾರಾಗಣದ ಕುರಿತು ಈವರೆಗೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಕಲಾವಿದರೂ ಟಾಕ್ಸಿಕ್ ಕುರಿತಾಗಿ ಮಾತನಾಡಿರಲಿಲ್ಲ. ಆದರೀಗ ಮೊದಲ ಬಾರಿಗೆ ಚಿತ್ರದ ಓರ್ವ ನಾಯಕಿ ಟಾಕ್ಸಿಕ್ ಕುರಿತಾಗಿ ಮಾತನಾಡಿದ್ದಾರೆ. ಈ ಮೂಲಕ ಈಕೆ ನಟಿಸಿರುವ ಗುಮಾನೆಗೆ ಅಧಿಕೃತ ಮುದ್ರೆ ಒತ್ತಿದ್ದಾರೆ. ಆಕೆಯೇ ನಟಿ ಹ್ಯೂಮಾ ಖುರೇಶಿ.
ಟಾಕ್ಸಿಕ್‌ನಲ್ಲಿ ಭರ್ತಿ ಅರ್ಧ ಡಜನ್ ಖ್ಯಾತ ನಟಿಯರು ನಟಿಸಿರುವ ಸುದ್ದಿ ಇದೆ. ಆ ಲಿಸ್ಟ್‌ನಲ್ಲಿ ಹ್ಯೂಮಾ ಖುರೇಶಿ ಕೂಡ ಇದ್ದಾರೆ. ಇದೀಗ ಹ್ಯೂಮಾ ಮೊದಲ ಬಾರಿಗೆ ಅಧಿಕೃತವಾಗಿ ತಾವು ಟಾಕ್ಸಿಕ್ ಸಿನಿಮಾದಲ್ಲಿ ನಟಿಸಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಯುಟ್ಯೂಬ್ ವಾಹಿನಿಯ ಸಂದರ್ಶನವೊಂದಕ್ಕೆ ಮಾತನಾಡುತ್ತಾ ಟಾಕ್ಸಿಕ್ ನನ್ನ ಮುಂಬರುವ ದೊಡ್ಡ ಸಿನಿಮಾ ಪ್ರಾಜೆಕ್ಟ್ ಎಂದಿದ್ದಾರೆ.
ಯಶ್ ಬಗ್ಗೆ ಮಾತನಾಡಿರುವ ಹ್ಯೂಮಾ, ಯಶ್ ಅವರಂತಹ ಸೂಪರ್‌ಸ್ಟಾರ್, ಗೀತು ಮೋಹನ್‌ದಾಸ್ ಅವರಂತಹ ಸಮರ್ಥ ನಿರ್ದೇಶಕಿಯ ಜೊತೆ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಪುಣ್ಯ. ಟಾಕ್ಸಿಕ್ ಅದ್ಭುತ ಅನುಭವವನ್ನು ನನಗೆ ನೀಡಿದೆ. ಅಸಾಮಾನ್ಯ, ಅನನ್ಯವಾದ ಲೋಕವನ್ನು ಟಾಕ್ಸಿಕ್‌ನಲ್ಲಿ ಸೃಷ್ಟಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
