ಉದಯವಾಹಿನಿ, ಬೆಂಗಳೂರು: ಹಿಂದುಸ್ತಾನಿ, ಹಿಂದೂ ರಾಷ್ಟ್ರ ಅನ್ನೋ ಸಂಘದ ನಿಲುವು ಎಂದಿಗೂ ಬದಲಾಗುವುದಿಲ್ಲ. ಸಂಘಕ್ಕೆ ತೃತೀಯಲಿಂಗಿಗಳೂ ಬರಬಹುದು ಎಂದು ಆರ್‌ಎಸ್‌ಎಸ್‌ ಸರಸಂಘಚಾಲಕ ಮೋಹನ್‌ ಭಾಗವತ್‌ ಕರೆ ನೀಡಿದರು. ಹೊಸಕೆರೆಹಳ್ಳಿ ಖಾಸಗಿ ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಘದಲ್ಲಿ (RSS) 3,700ಕ್ಕೂ ಹೆಚ್ಚು ಪ್ರಚಾರಕರಿದ್ದಾರೆ, 6 ಲಕ್ಷಕ್ಕೂ ಹೆಚ್ಚು ಸ್ವಯಂಸೇವಕರಿದ್ದಾರೆ. ಪ್ರತಿ ವರ್ಷ 350ಕ್ಕೂ ಹೆಚ್ಚು ಜನ ಸೇರ್ಪಡೆ ಆಗ್ತಿದ್ದಾರೆ. ಸಂಘದಿಂದ ಯಾರಿಗೂ ಯಾವುದೇ ನಿರೀಕ್ಷೆ ಇರಬಾರದು. ಜಾತಿ, ಧರ್ಮಗಳ ಹೆಸರದಲ್ಲಿ ಸಂಘ ಏನೂ ಮಾಡುವುದಿಲ್ಲ. ತೃತೀಯಲಿಂಗಿಗಳೂ ಕೂಡ ಸಂಘಕ್ಕೆ ಸೇರಬಹುದಾಗಿದೆ.
ಇದೇ ವೇಳೆ ಭಾರತ-ಪಾಕ್‌ ನಡುವಿನ ಸಂಘರ್ಷದ ಕುರಿತು ಮಾತನಾಡಿ, ಭಾರತ ಯಾವಾಗಲೂ ಪಾಕಿಸ್ತಾನದ ಜೊತೆಗೂ ಶಾಂತಿಯನ್ನೇ ಬಯಸುತ್ತೆ. ಆದ್ರೆ ಪಾಕಿಸ್ತಾನ ಶಾಂತಿಯನ್ನ ಬಯಸಲ್ಲ. ಆದ್ದರಿಂದ ನಾವು ಅವರದ್ದೇ ಭಾಷೆಯಲ್ಲಿ ಅರ್ಥ ಮಾಡಿಸಬೇಕಾಗುತ್ತೆ. ಮುಂದೊಂದುದಿನ ಅವರಿಗೆ ಅರ್ಥವಾಗುತ್ತೆ.

Leave a Reply

Your email address will not be published. Required fields are marked *

error: Content is protected !!