ಉದಯವಾಹಿನಿ, ದೆಹಲಿ: ಭಾರತದಲ್ಲಿ ಹೊಸ ಮನೆಗೆ ಹೋಗುವಾಗ ಸಾಮಾನ್ಯವಾಗಿ ಗೃಹಪ್ರವೇಶ ಸಮಾರಂಭವನ್ನು ಆಚರಿಸಲಾಗುತ್ತದೆ. ಈ ಆಚರಣೆಯ ಮೂಲಕ ಹೊಸ ಮನೆ ಶುದ್ಧೀಕರಿಸಲ್ಪಡುತ್ತದೆ ಮತ್ತು ನಕಾರಾತ್ಮಕ ಶಕ್ತಿಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಅನೇಕ ಪ್ರದೇಶಗಳಲ್ಲಿ, ಸಮಾರಂಭದ ಸಮಯದಲ್ಲಿ ಮನೆಯೊಳಗೆ ಹಸುವನ್ನು ತರುವುದು ಸಾಂಪ್ರದಾಯಿಕವಾಗಿದೆ. ಏಕೆಂದರೆ, ಹಿಂದೂ ಧರ್ಮದಲ್ಲಿ ಹಸುವನ್ನು (Cow) ಶುದ್ಧತೆಯ ಸಂಕೇತವಾಗಿ ನೋಡಲಾಗುತ್ತದೆ.ಆದರೆ, ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುವ ಕುಟುಂಬಗಳಿಗೆ ಮನೆಯೊಳಗೆ ನಿಜವಾದ ಹಸುವನ್ನು ತರಲು ಸಾಧ್ಯವಿಲ್ಲ. ಆದರೆ, ಒಂದು ಅಸಾಮಾನ್ಯ ಸಮಾರಂಭದಲ್ಲಿ, ಕುಟುಂಬವೊಂದು ಸೃಜನಶೀಲ ಪರಿಹಾರವನ್ನು ಹುಡುಕಿದೆ. ಅವರು ತಮ್ಮ ಗೃಹಪ್ರವೇಶ ಸಮಾರಂಭಕ್ಕೆ ಆಟಿಕೆ ಹಸುವನ್ನು ಬಳಸಿದರು. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.ನಿಜವಾದ ಹಸುವನ್ನು ಮೇಲಿನ ಮಹಡಿಯ ಅಪಾರ್ಟ್‌ಮೆಂಟ್‌ಗೆ ಸ್ಥಳಾಂತರಿಸುವುದು ತುಂಬಾ ಕಷ್ಟಕರವಾದ ಕಾರಣ ಕುಟುಂಬವು ಆಟಿಕೆ ಹಸುವನ್ನು ತರುವ ನಿರ್ಧಾರ ತೆಗೆದುಕೊಂಡಿತು. ಆಚರಣೆಯ ಸಮಯದಲ್ಲಿ, ಪುರೋಹಿತರು ಶ್ಲೋಕಗಳನ್ನು ಪಠಿಸಿದರು. ಈ ವೇಳೆ ಪ್ಲಾಸ್ಟಿಕ್ ಹಸುವನ್ನು ಪೂಜಿಸಲಾಯಿತು ಮತ್ತು ಅದಕ್ಕೆ ಹಾರವನ್ನೂ ಹಾಕಿದರು.

Leave a Reply

Your email address will not be published. Required fields are marked *

error: Content is protected !!