ಉದಯವಾಹಿನಿ, ಗಾಂಧಿನಗರ: ದೇಶಾದ್ಯಂತ ಹಲವೆಡೆ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿದ್ದ ಮೂವರು ಐಸಿಸ್ ಉಗ್ರರನ್ನ ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳ ಅಹಮದಾಬಾದ್‌ನಲ್ಲಿ ಬಂಧಿಸಿದೆ. ಎಟಿಎಸ್ ಪ್ರಕಾರ, ಬಂಧಿತ ಉಗ್ರರು ಕಳೆದ ಒಂದು ವರ್ಷದಿಂದಲೂ ಕಣ್ಗಾವಲಿನಲ್ಲಿದ್ದರು. ಶಸ್ತ್ರಾಸ್ತ್ರಗಳನ್ನ ವಿನಿಮಯ ಮಾಡಿಕೊಳ್ಳುವ ವೇಳೆ ಸಿಕ್ಕಿಬಿದ್ದಿದ್ದಾರೆ. ಐಸಿಸ್ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದ ಮೂವರು 2 ಪ್ರತ್ಯೇಕ ಮಾಡ್ಯೂಲ್‌ಗಳಿಗೆ ಸೇರಿದವರಾಗಿದ್ದರು. ದೇಶಾದ್ಯಂತ ಅನೇಕ ಸ್ಥಳಗಳಲ್ಲಿ ವಿದ್ವಂಸಕ ಕೃತ್ಯಗಳನ್ನ ಎಸಗಲು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ. ಸದ್ಯ ಮೂವರನ್ನ ಬಂಧಿಸಿರುವ ಅಧಿಕಾರಿಗಳು ದಾಳಿ ನಡೆಸಲು ಉದ್ದೇಶಿಸಿದ್ದ ಸಂಭಾವ್ಯ ಗುರಿ ಮತ್ತು ಸ್ಥಳಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
