ಉದಯವಾಹಿನಿ, ಮುಂಬೈ: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಟೂರ್ನಿಯ 19ನೇ ಆವೃತ್ತಿಗೆ ಈಗಿನಿಂದಲೇ ತಯಾರಿ ಶುರುವಾಗಿದೆ. ಡಿಸೆಂಬರ್ 15ರಂದು ಭಾರತದಲ್ಲೇ ಮಿನಿ ಹರಾಜು ನಡೆಯುವ ಸಾಧ್ಯತೆಗಳಿವೆ. ದುಬೈನ ಜೆಡ್ಡಾದಲ್ಲಿ ನಡೆದ ಕೊನೆಯ ಎರಡು ಹರಾಜಿಗಿಂತಲೂ ಭಿನ್ನವಾಗಿ 2026ರ ಹರಾಜು ಪ್ರಕ್ರಿಯೆಯನ್ನ ಭಾರತದಲ್ಲೇ (ನಡೆಸಲು ತಯಾರಿ ನಡೆಸಲಾಗುತ್ತಿದೆ. ಆದ್ರೆ ಈವರೆಗೆ ಯಾವುದೇ ಅಧಿಕೃತ ನಿರ್ಧಾರ ತೆಗೆದುಕೊಂಡಿಲ್ಲ. ಹೀಗಾಗಿ ನವೆಂಬರ್ 15ರ ಒಳಗೆ ಎಲ್ಲಾ ಫ್ರಾಂಚೈಸಿಗಳು (IPL Franchise) ರಿಟೇನ್ ಆಟಗಾರರ ಪಟ್ಟಿ ಬಿಡುಗಡೆ ಮಾಡುವಂತೆ ಐಪಿಎಲ್ ಮಂಡಳಿ ಸೂಚನೆ ನೀಡಿದೆ.
