ಉದಯವಾಹಿನಿ, ನಾಸಿಕ್‌: ಶ್ರೇಯಸ್‌ ಗೋಪಾಲ್‌ ಅವರ ಆಲ್‌ರೌಂಡರ್‌ ಆಟದ ಬಲದಿಂದ ಕರ್ನಾಟಕ ತಂಡ, 2025-26ರ ಸಾಲಿನ ರಣಜಿ ಟ್ರೋಫಿ ಟೂರ್ನಿಯ ಎಲೈಟ್‌ ಬಿ ಪಂದ್ಯದಲ್ಲಿ ಮಹಾರಾಷ್ಟ್ರ ಎದುರು ಎರಡನೇ ದಿನ ಮೇಲುಗೈ ಸಾಧಿಸಿದೆ. ಕರ್ನಾಟಕ ತಂಡ ಎರಡನೇ ದಿನ ಪ್ರಥಮ ಇನಿಂಗ್ಸ್‌ನಲ್ಲಿ 313 ರನ್‌ಗಳಿಗೆ ಆಲೌಟ್‌ ಆಯಿತು. ಬಳಿಕ ಪ್ರಥಮ ಇನಿಂಗ್ಸ್‌ ಆರಂಭಿಸಿದ್ದ ಮಹಾರಾಷ್ಟ್ರ ತಂಡ ಉತ್ತಮ ಆರಂಭ ಪಡೆದರೂ ಶ್ರೇಯಸ್‌ ಗೋಪಾಲ್‌ ಸ್ಪಿನ್‌ ಮೋಡಿಗೆ ನಲುಗಿ ಎರಡನೇ ದಿನದಾಟದ ಅಂತ್ಯಕ್ಕೆ 66 ಓವರ್‌ಗಳಿಗೆ 200 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡು ಹಿನ್ನಡೆಯ ಭೀತಿಗೆ ಒಳಗಾಗಿದೆ.
ಇಲ್ಲಿನ ಗಾಲ್ಫ್‌ ಕ್ಲಬ್‌ ಗ್ರೌಂಡ್‌ನಲ್ಲಿ ಭಾನುವಾರ ಬೆಳಿಗ್ಗೆ 5 ವಿಕೆಟ್‌ ನಷ್ಟಕ್ಕೆ 257 ರನ್‌ಗಳಿಂದ ಎರಡನೇ ದಿನದಾಟವನ್ನು ಆರಂಭಿಸಿದ ಕರ್ನಾಟಕ ತಂಡ, ಭೋಜನ ವಿರಾಮಕ್ಕೂ ಮುನ್ನ 313 ರನ್‌ಗಳಿಗೆ ಆಲೌಟ್‌ ಆಯಿತು. ಎರಡನೇ ದಿನ ಶ್ರೇಯಸ್‌ ಗೋಪಾಲ್‌ ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿ ಅರ್ಧಶತಕವನ್ನು ಬಾರಿಸಿದರು. ಅಭಿನವ್‌ ಮನೋಹರ್‌ ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಶ್ರೇಯಸ್‌ಗೆ ಸಾಥ್‌ ನೀಡಲಿಲ್ಲ. ಹಾಗಾಗಿ ಎರಡನೇ ದಿನ ಕರ್ನಾಟಕ ತಂಡ 56 ರನ್‌ಗಳಿಗೆ ಸೀಮಿತವಾಯಿತು.
ಎರಡನೇ ದಿನ ಕರ್ನಾಟಕ ತಂಡದ ಪರ ಶ್ರೇಯಸ್‌ ಗೋಪಾಲ್‌ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಗಮನ ಸೆಳೆದರು. ಮೊದಲನೇ ದಿನ 32 ರನ್‌ ಗಳಿಸಿದ್ದ ಶ್ರೇಯಸ್‌ ಗೋಪಾಲ್‌, ಎರಡನೇ ದಿನ ಭಾನುವಾರ ಬ್ಯಾಟಿಂಗ್‌ ಮುಂದುವರಿಸಿ ಅರ್ಧಶತಕವನ್ನು ಪೂರ್ಣಗೊಳಿಸಿದರು. ಅಭಿನವ್‌ ಮನೋಹರ್‌ 47 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಆದರೆ, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದ ಶ್ರೇಯಸ್‌ ಗೋಪಾಲ್‌, 162 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ 71 ರನ್‌ಗಳನ್ನು ಗಳಿಸಿದ ಬಳಿಕ ವಿಕೆಟ್‌ ಒಪ್ಪಿಸಿದರು.

ಬಳಿಕ ಪ್ರಥಮ ಇನಿಂಗ್ಸ್‌ ಆರಂಭಿಸಿದ ಮಹಾರಾಷ್ಟ್ರ ತಂಡಕ್ಕೆ ಓಪನರ್ಸ್‌ ಪೃಥ್ವಿ ಶಾ (71) ಹಾಗೂ ಅರ್ಶಿನ್‌ ಕುಲಕರ್ಣಿ (34) ಉತ್ತಮ ಆರಂಭ ತಂದುಕೊಟ್ಟರು. ಈ ಜೋಡಿ ಮೊದಲನೇ ವಿಕೆಟ್‌ಗೆ 98 ರನ್‌ಗಳನ್ನು ಕಲೆ ಹಾಕಿತ್ತು. ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ಪೃಥ್ವಿ ಶಾ, ಕೆಲ ಕಾಲ ಕರ್ನಾಟಕ ಬೌಲರ್‌ಗಳನ್ನು ದಂಡಿಸಿದ್ದರು. ಅವರು ಆಡಿದ 92 ಎಸೆತಗಳಲ್ಲಿ 9 ಬೌಂಡರಿಗಳೊಂದಿಗೆ 7

Leave a Reply

Your email address will not be published. Required fields are marked *

error: Content is protected !!