ಉದಯವಾಹಿನಿ, ಚೆನ್ನೈ: ತಮ್ಮ ಮೇಲೆ ಬೆಂಗಳೂರಿನ ಇನ್ಸ್ಟಾಗ್ರಾಮ್ ಖ್ಯಾತಿಯ ಫ್ಯಾಶನ್ ಡಿಸೈನರ್ ಮಹಿಳೆ ಪಾರ್ವತಿ ದಾಖಲಿಸಿರುವ ಲೈಂಗಿಕ ಕಿರುಕುಳ ಪ್ರಕರಣವು, ತಾವು ಈ ಹಿಂದೆ ದಾಖಲಿಸಿದ್ದ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದಿಂದ ಪಾರಾಗಲು ರೂಪಿಸಿದ ಸಂಚು ಎಂದು ‘ಬಿಗ್ ಬಾಸ್’ ತಮಿಳು ಖ್ಯಾತಿಯ ಇವಿಪಿ ಫಿಲ್ಮ್ ಸಿಟಿಯ ಮಾಲೀಕ ಸಂತೋಷ್ ರೆಡ್ಡಿ ಆರೋಪಿಸಿದ್ದಾರೆ.
ಪಾರ್ವತಿ ಅವರು ಬೆಂಗಳೂರಿನಲ್ಲಿ ದೂರು ನೀಡುವುದಕ್ಕೂ 8 ದಿನಗಳ ಮೊದಲೇ, ಅಂದರೆ ಸೆಪ್ಟೆಂಬರ್ 17, 2025ರಂದೇ ತಾವು ಚೆನ್ನೈನಲ್ಲಿ ವಂಚನೆ ದೂರು ದಾಖಲಿಸಿದ್ದಾಗಿ ಸಂತೋಷ್ ರೆಡ್ಡಿ ಅಧಿಕೃತ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ಮೊದಲೇ ದೂರು ದಾಖಲಿಸಿದ್ದ ಸಂತೋಷ್ ರೆಡ್ಡಿ ಚೆನ್ನೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಂತೋಷ್ ರೆಡ್ಡಿ, “ನಾನು ಪಾರ್ವತಿ ಮತ್ತು ಅವರ ಸಹಚರರಿಂದ ವಂಚನೆಗೊಳಗಾದ ಬಗ್ಗೆ 2025ರ ಸೆಪ್ಟೆಂಬರ್ 17ರಂದು ಚೆನ್ನೈನ ನಸರತ್‌ಪೇಟೆ ಪೊಲೀಸ್ ಠಾಣೆ ಮತ್ತು ಆವಡಿ ಪೊಲೀಸ್ ಆಯುಕ್ತರ ಕಚೇರಿಯ ಕೇಂದ್ರ ಅಪರಾಧ ವಿಭಾಗದಲ್ಲಿ ದೂರು ನೀಡಿದ್ದೆ. ನನ್ನ ದೂರಿನ ಅನ್ವಯ, ಪೊಲೀಸರು ಎಫ್‌ಐಆರ್ ದಾಖಲಿಸಿ, ಪಾರ್ವತಿ ಅವರ ಬ್ಯಾಂಕ್ ಖಾತೆಯನ್ನು ಸ್ಥಗಿತಗೊಳಿಸಿ ತನಿಖೆ ಆರಂಭಿಸಿದ್ದರು” ಎಂದು ತಿಳಿಸಿದ್ದಾರೆ
