ಉದಯವಾಹಿನಿ, ಲಂಡನ್: ಹಂಗೇರಿ ಮೂಲದ ಬ್ರಿಟಿಷ್ ಲೇಖಕ ಡೇವಿಡ್ ಸಲೊವಿ ಅವರು 2025ರ ಬೂಕರ್ ಪ್ರಶಸ್ತಿ ಗೆದ್ದಿದ್ದಾರೆ. ಅವರ ‘ಫ್ರೆಶ್” (Flesh) ಕೃತಿಗೆ ಈ ಪ್ರಶಸ್ತಿ ಲಭಿಸಿದೆ.ಭಾರತ ಮೂಲದ ಕಿರಣ್ ದೇಸಾಯಿಯವರ ‘ದಿ ಲೋನ್ಸಿನೆಸ್ ಆಫ್ ಸೋನಿಯಾ ಆ್ಯಂಡ್ ಸನ್ನಿ’ ಕೃತಿಯೂ ಬೂಕರ್ ಪ್ರಶಸ್ತಿ ಸ್ಪರ್ಧೆಯಲ್ಲಿತ್ತು. ಅವರಿಗೆ ಸ್ವಲ್ಪದರಲ್ಲೇ ಪ್ರಶಸ್ತಿ ತಪ್ಪಿದೆ.
51 ವರ್ಷದ ಸಲೊವಿ ಅವರಿಗೆ ಕಳೆದ ವರ್ಷದ ಬೂಕರ್ ಪ್ರಶಸ್ತಿ ವಿಜೇತೆ ಸಮಂತಾ ಹಾರ್ವಿಯವರು ಟ್ರೋಫಿ ನೀಡಿದರು. ಈ ಪ್ರಶಸ್ತಿ 50 ಸಾವಿರ ಪೌಂಡ್ ಹಣ ಒಳಗೊಂಡಿದೆ. ಲಂಡನ್‌ನ ಬಿಲ್ಲಿಂಗ್ಸ್‌ಗೇಟ್‌ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಿತು.
