ಉದಯವಾಹಿನಿ, ಅಡಿಯಿಂದ ಮುಡಿಯವರೆಗೂ ದೇಹದ ಎಲ್ಲಾ ಭಾಗಗಳಿಗೂ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡೇ ಫೇಮಸ್ ಆಗ್ತಿರೋ ಒಂದಿಷ್ಟು ನಟಿಯರು ಇದ್ದಾರೆ. ಅದ್ರಲ್ಲೂ ಬಾಲಿವುಡ್ನಲ್ಲಿ ಬ್ಯೂಟಿಗಳು ಎಂದುಕರೆಸಿಕೊಳ್ಳುತ್ತಿರುವ ಬಹುತೇಕ ನಟಿಮಣಿಗಳದ್ದೂ ಇದೇ ಸ್ಥಿತಿ. ದೇಹದ ಒಂದಲ್ಲೊಂದು ಭಾಗಗಳಿಗೆ ಇವರು ಕತ್ತರಿ ಹಾಕಿಸಿಕೊಂಡವರೇ.
ನಟಿ ಶ್ರೀದೇವಿಯ ಮೂಗಿನ ಸರ್ಜರಿಯಿಂದ ಹಿಡಿದು ನಟಿ ಶೆರ್ಲಿನ್ ಚೋಪ್ರಾ , ರಾಖಿ ಸಾವಂತ್ ರಂಥ ನಟಿಯರು ದೇಹದ ಭಾಗಕ್ಕೇ ಕತ್ತರಿ ಹಾಕಿಸಿಕೊಂಡವರೇ. ಇತ್ತೀಚೆಗೆ ಸೋಷಿಯಲ್ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್, ಎರಡು ತಿಂಗಳ ಒಳಗೆ ನನಗೆ ದೊಡ್ಡ ಸ್ತನಗಳು ಬೇಕು ಅಂತ ಡಾಕ್ಟರ್ ಮುಂದೆ ಸಿಲಿಕಾನ್ ಸ್ತನ ಹಿಡಿದುಕೊಂಡು ಕುಳಿತಿದ್ದ ಪ್ರಸಂಗವೂ ಕಣ್ಣಮುಂದಿದೆ. ಈ ನಡುವೆ ಬಾಲಿವುಡ್ ಬ್ಯೂಟಿಯರಲ್ಲಿ ಒಬ್ಬರಾದ ನಟಿ ಶೆರ್ಲಿನ್ ಚೋಪ್ರಾ ಅಚ್ಚರಿ ನಿರ್ಧಾರವೊಂದನ್ನ ಕೈಗೊಂಡಿದ್ದಾರೆ. ದೇಹದ ಹಲವು ಭಾಗಗಳಲ್ಲಿ ಅತೀವ ನೋವು ಕಾಣಿಸಿಕೊಂಡ ಹಿನ್ನೆಲೆ ಬ್ರೆಸ್ಟ್ ಇಂಪ್ಲಾಂಟ್ ಅನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಸಲು ನಿರ್ಧರಿಸಿದ್ದಾರೆ.
ಹೌದು. ಶೆರ್ಲಿನ್ ಕಳೆದ ಕೆಲವು ದಿನಗಳಿಂದ ನಿರಂತರ ಬೆನ್ನು ನೋವು, ಎದೆ ನೋವು, ಭುಜದ ನೋವು ಮತ್ತು ಎದೆಯ ಭಾರದ ಸಮಸ್ಯೆಗಳಿಂದ ಬಳಲುತ್ತಿದ್ದರು. ವೈದ್ಯಕೀಯ ತಪಾಸಣೆ ಬಳಿಕ ಇದು ಬ್ರೆಸ್ಟ್ ಇಂಪ್ಲಾಂಟ್ ಅಥವಾ ಸ್ತನ ಕಸಿಯಿಂದಾಗಿರುವ ಪರಿಣಾಮ ಎಂಬುದು ಗೊತ್ತಾಯಿತು. ಹೀಗಾಗಿ ಕಸಿ ಮಾಡಿಸಿದ್ದ ಸ್ತನದ ಭಾಗವನ್ನ ತೆಗೆಸಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಶೀಘ್ರದಲ್ಲೇ ಶಸ್ತ್ರಚಿಕಿತ್ಸೆಗೆ ಒಳಗಾಗುವುದಾಗಿ ತಿಳಿಸಿದ್ದಾರೆ.
