ಉದಯವಾಹಿನಿ, ನವದೆಹಲಿ: ಐದು ಬಾರಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡ ಮುಂದಿನ 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ನಿಮಿತ್ತ ಲಖನೌ ಸೂಪರ್ ಜಯಂಟ್ಸ್ ತಂಡದಿಂದ ಟ್ರೇಡ್ ಡೀಲ್ ಮೂಲಕ ಶಾರ್ದುಲ್ ಠಾಕೂರ್ ಅವರನ್ನು ಕರೆಸಿಕೊಂಡಿದೆ. 2024ರ ಐಪಿಎಲ್ ಟೂರ್ನಿಯ ಹರಾಜಿನಲ್ಲಿ ಶಾರ್ದುಲ್ ಠಾಕೂರ್ ಅವರನ್ನು 2 ಕೋಟಿ ರು. ಗಳಿಗೆ ಗಾಯಾಳು ಮೊಹ್ಸಿನ್ ಖಾನ್ ಅವರ ಸ್ಥಾನಕ್ಕೆ ತರಲಾಗಿತ್ತು. ಈ ಸೀಸನ್‌ನಲ್ಲಿ ಶಾರ್ದುಲ್ ಠಾಕೂರ್ 10 ಪಂದ್ಯಗಳನ್ನು ಆಡಿದ್ದರು. ಇವರು ಎಲ್‌ಎಸ್‌ಜಿ ಪರ ಶಾರ್ದುಲ್ ಅವರು ಅವಕಾಶ ಸಿಕ್ಕಾಗಲೆಲ್ಲಾ ಉತ್ತಮ ಪ್ರದರ್ಶನವನ್ನು ತೋರುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಮುಂಬೈ ಫ್ರಾಂಚೈಸಿ ಕೂಡ 2 ಕೋಟಿ ರು. ಗಳಿಗೆ ಖರೀದಿಸಿದೆ.
ಅಂದ ಹಾಗೆ ಕಳೆದ ಐಪಿಎಲ್ ಹರಾಜಿನಲ್ಲಿ ಶಾರ್ದುಲ್ ಠಾಕೂರ್ ಅವರನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ. ಹಾಗಾಗಿ ಮೆಗಾ ಆಕ್ಷನ್‌ನಲ್ಲಿ ಶಾರ್ದುಲ್ ಅನ್‌ಸೋಲ್ಡ್ ಆಗಿದ್ದರು. ಆದರೆ, ಟೂರ್ನಿಯ ಆರಂಭಕ್ಕೂ ಮುನ್ನ ಯುವ ವೇಗದ ಬೌಲರ್ ಮೊಹಿನ್ ಖಾನ್ ಗಾಯಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಅಲ್‌ಸೋಲ್ಡ್ ಆಗಿದ್ದ ಶಾರ್ದುಲ್ ಠಾಕೂರ್ ಅವರನ್ನು ಲಖನೌ ಫ್ರಾಂಚೈಸಿ ಖರೀದಿಸಿತ್ತು. ಇವರು ಆಡಿದ ಆರಂಭಿಕ ಎರಡು ಪಂದ್ಯಗಳಿಂದ 6 ವಿಕೆಟ್‌ಗಳನ್ನು ಕಬಳಿಸಿದ್ದರು. ಇದರಲ್ಲಿ ಅವರು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್ ಸಾಧನೆ ಮಾಡಿದ್ದರು. ಆ ಮೂಲಕ ಕಳೆದ ಟೂರ್ನಿಯಲ್ಲಿ ಆಡಿದ 10 ಪಂದ್ಯಗಳಿಂದ 13 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
