ಉದಯವಾಹಿನಿ ಬೆಂಗಳೂರು: ಕರ್ನಾಟಕವು ಕೈಗೆಟುಕುವ ದರದಲ್ಲಿ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಕಂಪ್ಯೂಟರ್ ಲಾಂಚ್ ಮಾಡುತ್ತಿದೆ. ನಾಳೆ (ನ.18) ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ ಲಾಂಚ್ ಮಾಡ್ತಿದ್ದೇವೆ ಎಂದು ಐಟಿ, ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಬೆಂಗಳೂರಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬೆಂಗಳೂರು ಟೆಕ್ ಸಮ್ಮಿಟ್ 2025, ನಾಳೆಯಿಂದ ಮೂರು ದಿನ ನಡೆಯಲಿದೆ. ದೇಶದಲ್ಲಿ 10%ಗಿಂತ ಕಡಿಮೆ ಮನೆಯಲ್ಲಿ ಕಂಪ್ಯೂಟರ್ ಇದೆ. ಕರ್ನಾಟಕದಲ್ಲಿ 15% ಮನೆಯಲ್ಲಿ ಕಂಪ್ಯೂಟರ್ ಇದೆ. 60% ಭಾರತೀಯ ವಿಧ್ಯಾರ್ಥಿಗಳು ಆನ್‌ಲೈನ್ ಶಿಕ್ಷಣದಿಂದ ವಂಚಿತರಾಗ್ತಿದ್ದಾರೆ. ಭಾರತದ ಡಿಜಿಟಲ್ ಎಕಾನಮಿ ಹೆಚ್ಚುತ್ತಿದೆ. ಹೆಚ್ಚು ಜನರಿಗೆ ಕೈಗೆಟಕುವ ದರದಲ್ಲಿ ಕಂಪ್ಯೂಟರ್ ಸಿಗಬೇಕಿದೆ. ಹಾಗಾಗಿ KEO ಕಂಪ್ಯೂಟರ್ ಅನ್ನು ನಾವು ಲಾಂಚ್ ಮಾಡ್ತಿದ್ದೇವೆ. ನಾಳೆ KEOನ ಬೆಲೆಯನ್ನು ನಾವು ಬಹಿರಂಗಪಡಿಸಲಿದ್ದೇವೆ ಎಂದು ತಿಳಿಸಿದ್ದಾರೆ.
