ಉದಯವಾಹಿನಿ, ಬೆಂಗಳೂರು: ಯುಗಾದಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ದರ ಏರಿಕೆ ಬಿಸಿ ಮುಟ್ಟಿದೆ. ಹಬ್ಬದ ಹಿನ್ನೆಲೆ ಖಾಸಗಿ ಬಸ್ ಏಜೆನ್ಸಿಗಳು ಟಿಕೆಟ್ ದರ ಹೆಚ್ಚಿಸಿದ್ದು ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕಿದೆ. ಯುಗಾದಿ ಮತ್ತು ರಂಜಾನ್ ಹಬ್ಬವನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಬಸ್ ಮಾಲೀಕರು 2-3 ಪಟ್ಟು ದರ ಹೆಚ್ಚಳ ಮಾಡಿದ್ದಾರೆ. ಬೆಂಗಳೂರು – ಮಂಗಳೂರು, ಹುಬ್ಬಳ್ಳಿ, ಶಿವಮೊಗ್ಗ ಸೇರಿದಂತೆ ಹಲವು ಮಾರ್ಗಗಳಲ್ಲಿ ದರ ಏರಿಕೆ ಮಾಡಲಾಗಿದೆ.

ಈಗ ದರ ಎಷ್ಟಿದೆ?
ಬೆಂಗಳೂರು – ಮಂಗಳೂರು:
600 ರೂ. – 2,999 ರೂ.

ಬೆಂಗಳೂರು – ಧಾರವಾಡ/ಹುಬ್ಬಳ್ಳಿ:
400-1,300 ರೂ. – 4,500 ರೂ.

ಬೆಂಗಳೂರು – ಶಿವಮೊಗ್ಗ:
400 ರೂ. – 2,799 ರೂ.

ಬೆಂಗಳೂರು – ಧರ್ಮಸ್ಥಳ:
500 ರೂ. – 3,600 ರೂ

ಬೆಂಗಳೂರು-ಮೈಸೂರು:
350 ರೂ. – 2,500 ರೂ.

Leave a Reply

Your email address will not be published. Required fields are marked *

error: Content is protected !!