ಉದಯವಾಹಿನಿ, ಚಿತ್ರದುರ್ಗ: ಶಿಕ್ಷಕರು ಮತ್ತು ಪೋಷಕರು ಇಬ್ಬರೂ ಮಕ್ಕಳ ಬದುಕಿನ ಚಕ್ಕಡಿಯ ಎರಡು ಚಕ್ರಗಳಿದ್ದಂತೆ ಪೋಷಕರ ಮತ್ತು ಶಿಕ್ಷಕರ ಸಭೆಗಳು ಕೇವಲ ವಾದವಿವಾದಗಳಿಗೆ ಸೀಮಿತವಾಗದೆ ಆರೋಗ್ಯಪೂರ್ಣ ಚರ್ಚೆಗಳ ಮೂಲಕ ಮಕ್ಕಳ ಸಮಗ್ರ ಬೆಳವಣಿಗೆಗೆ ಸಹಾಯಕವಾಗುವಂತಿರಬೇಕು ಎಂದು ಯರಬಳ್ಳಿ ಸರ್ಕಾರಿ ಪಿಎಂಶ್ರೀ ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ತಿಪ್ಪೇಸ್ವಾಮಿ ಟಿ. ಅಭಿಪ್ರಾಯ ಪಟ್ಟಿದ್ದಾರೆ.
ಹಿರಿಯೂರು ತಾಲ್ಲೂಕು ಯರಬಳ್ಳಿ ಗ್ರಾಮದ ಸರ್ಕಾರಿ ಪಿಎಂಶ್ರೀ ಶಾಲೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಕ್ಕಳ ದಿನಾಚರಣೆ ಹಾಗೂ ಶಿಕ್ಷಕರು ಪೋಷಕರ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಪೋಷಕರಾದವರು ಮನೆಯಲ್ಲಿ ಮಕ್ಕಳಿಗೆ ಶೈಕ್ಷಣಿಕ ಮತ್ತು ಭಾವನಾತ್ಮಕ ಬೆಂಬಲ ಒದಗಿಸುವ ಮೂಲಕ ಮಕ್ಕಳು ಆತ್ಮವಿಶ್ವಾಸ, ಸಕಾರಾತ್ಮಕ ವ್ಯಕ್ತಿತ್ವ ಸಮಾಜಿಕ ಕೌಶಲ್ಯಗಳನ್ನು ಬೆಳೆಸಲು ಹಾಗೂ ಶಿಕ್ಷಕರು ಶಾಲೆಯಲ್ಲಿ ಮಕ್ಕಳ ಜ್ಞಾನ, ಶಿಸ್ತು ಮತ್ತು ಸಮಾಜಮುಖಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ ಮೂಲಕ ಮಕ್ಕಳ ಸಮಗ್ರ ಅಭಿವೃದ್ಧಿಗೆ ನೆರವಾಗುವ ಮೂಲಕ ಮಕ್ಕಳ ಬದುಕನ್ನು ರೂಪಿಸಬೇಕಿದೆ ಎಂದು ಹೇಳಿದರು.
ಇದಕ್ಕೂ ಮೊದಲು ಸಭೆಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಯರಬಳ್ಳಿ ಗ್ರಾಮ ಪಂಚಾಯತಿ ಪಿಡಿಒ ಮಂಜುನಾಥ್ “ಯರಬಳ್ಳಿ ಪಿಎಂಶ್ರೀ ಶಾಲೆ ಇತರೆ ಯಾವುದೇ ಶಾಲೆಗೆ ಹೋಲಿಸಿಕೊಂಡರು ಇಲ್ಲಿ ಮಕ್ಕಳಿಗೆ ಭೌತಿಕ, ಭಾವನಾತ್ಮಕ ಹಾಗೂ ಸಾಮಾಜಿಕ ಭದ್ರತೆಯನ್ನು ನೀಡುವಲ್ಲಿ ಶಾಲಾ ಶಿಕ್ಷಕ ವೃಂದ ಯಶಸ್ವಿಯಾಗಿದೆ ಮಕ್ಕಳಿಗೆ ಆತ್ಮವಿಶ್ವಾಸ ಮತ್ತು ಹೊಸದನ್ನು ಕಲಿಯುವ ಪ್ರೇರಣೆಯನ್ನು ಉಂಟುಮಾಡುವಂತೆ ವಾತಾವರಣ ಸೃಷ್ಟಿಸಲಾಗಿದೆ ತಾಲ್ಲೂಕಿನ ಸಾಕಷ್ಟು ಸರ್ಕಾರಿ ಶಾಲೆಗಳಲ್ಲಿ ಕಲಿಕೆಯ ಎಲ್ಲಾ ಸೌಲಭ್ಯಗಳಿದ್ದರೂ ಮಕ್ಕಳ ಸಂಖ್ಯೆ ವಿರಳವಾಗಿವೆ ಯರಬಳ್ಳಿ ಸರ್ಕಾರಿ ಶಾಲೆಯಲ್ಲಿ 350ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿರುವುದು ಹೆಮ್ಮೆಯ ವಿಷಯವಾಗಿದೆ” ಎಂದು ಶಾಲೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸವಿತ ” ಗ್ರಾಮಸ್ಥರು ಹಾಗೂ ಮಕ್ಕಳ ಪೋಷಕರ ಸಹಕಾರದಿಂದ ಇಂದು ಯರಬಳ್ಳಿ ಸರ್ಕಾರಿ ಪಿಎಂಶ್ರೀ ಶಾಲೆ ಉತ್ತಮ ಮಾದರಿ ಶಾಲೆಯಾಗಿ ಹೆಸರು ಗಳಿಸಿದೆ ಪೋಷಕರ ಸಭೆಯಲ್ಲಿ ಶಾಲೆಯ ಎಲ್ಲಾ ಮಕ್ಕಳ ತಂದೆತಾಯಿಯರು ತಪ್ಪದೆ ಭಾಗವಹಿಸಬೇಕು ಪ್ರತಿಯೊಬ್ಬ ಪೋಷಕನೂ ಸಭೆಗೆ ಕಡ್ಡಾಯವಾಗಿ ಹಾಜರಾಗುವಾಗ ತಮ್ಮ ಮಕ್ಕಳೊಂದಿಗಡ ಚರ್ಚಿಸಿ ಪೂರ್ವ ತಯಾರಿ ಮಾಡಿಕೊಂಡು ಬಂದು ಮಕ್ಕಳ ಬಗ್ಗೆ ಸೂಕ್ತ ಪ್ರಶ್ನೆಗಳನ್ನು ಕೇಳಬೇಕು. ಪೋಷಕ-ಶಿಕ್ಷಕರ ನಡುವೆ ಸಮನ್ವಯ ಸುದೃಢವಾಗುತ್ತದೆ ಆಗ ಮಕ್ಕಳು ಹಾಗೂ ಶಾಲೆಯ ಪ್ರಗತಿಗೆ ದಾರಿದೀಪವಾಗುತ್ತದೆ ಎಂದು ಹೇಳಿದರು.
ದೈಹಿಕ ಶಿಕ್ಷಕ ರಾಜಪ್ಪ ಅವರ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭಗೊಂಡ ಸಭೆಗೆ ಸ.ಶಿ.ಶ್ರೀಮತಿ ವಿಜಯಮ್ಮ ಎಲ್ಲರನ್ನೂ ಸ್ವಾಗತಿಸಿದರು, ಆಂಗ್ಲಭಾಷಾ ಶಿಕ್ಷಕ ಮಂಜುನಾಥ್ ಶಾಲೆಯಲ್ಲಿ ದೊರೆಯುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು, ಸಭೆಯಲ್ಲಿ ಸಹ ಶಿಕ್ಷಕರಾದ ದರ್ಶನ್, ಮಾರುತಿ, ಶಾರದಮ್ಮ, ಅನಸೂಯಮ್ಮ, ಶಂಷಾದ್ ಬೇಗಂ, ಲಿಂಗರಾಜ್, ಯೋಗ ಶಿಕ್ಷಕ ರವಿ ಕೆ.ಅಂಬೇಕರ್ ಭಾಗವಹಿಸಿದ್ದರು. ಇದೇ ಸಂಧರ್ಭದಲ್ಲಿ ಸಭೆಯಲ್ಲಿ ಎಲ್ಲರಿಗೂ ಭಾರತ ಸಂವಿಧಾನದ ಪೀಠಿಕೆ ಬಂಧಿಸಲಾಯಿತು, ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.
