ಉದಯವಾಹಿನಿ, ಕೊಚ್ಚಿ: ಪ್ರತಿಭಟನೆ ವೇಳೆ ಹಿಂಸಾಚಾರ ತಪ್ಪಿಸಲು ಮತ್ತು ಗುಂಪು ಚದುರಿಸಲು ಬೇಕಾಗುವ ವಸ್ತು ಸೇರಿ ಹೆಚ್ಚುವರಿಯಾಗಿ ಅಶ್ರುವಾಯು ಮದ್ದುಗುಂಡುಗಳನ್ನು ಕೇರಳ ಪೊಲೀಸರು ಖರೀದಿಸಲಿದ್ದಾರೆ. ಪೊಲೀಸರ ಕೋರಿಕೆಯ ಮೇರೆಗೆ ರಾಜ್ಯ ಸರ್ಕಾರವು 7,500 ಅಶ್ರುವಾಯು ಮದ್ದುಗುಂಡುಗಳನ್ನು ಖರೀದಿಸಲು ಅನುಮೋದನೆ ನೀಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗೃಹ ಇಲಾಖೆಯ ಆದೇಶದ ಪ್ರಕಾರ, ಮಧ್ಯಪ್ರದೇಶದ ಗ್ವಾಲಿಯರ್‌ನ ತೇಕನ್‌ಪುರದಲ್ಲಿರುವ ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯ ಘಟಕದಿಂದ 77.13 ಲಕ್ಷ ರೂ. ಮೌಲ್ಯದ ಮದ್ದುಗುಂಡುಗಳನ್ನು ಖರೀದಿಸಲು ಅನುಮತಿ ನೀಡಲಾಗಿದೆ.
ಪೊಲೀಸ್ ಪ್ರಧಾನ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು, ಜಿಲ್ಲೆಯ ಸಶಸ್ತ್ರ್ರ ಮೀಸಲು ಶಿಬಿರಗಳು ಟಿಯರ್ ಸೋಕ್ ಮದ್ದುಗುಂಡುಗಳನ್ನು ನಿರ್ವಹಿಸುತ್ತವೆ ಎಂದು ಹೇಳಿದರು. ಖಾಲಿಯಾಗಿರುವ ಕಾರಣ ನಾವು ಹೆಚ್ಚಿನ ಮದ್ದುಗುಂಡುಗಳ ಬೇಡಿಕೆ ಇಟ್ಟಿದ್ದು ನಿಯಮಿತವಾಗಿ, ನಾವು ಅದನ್ನು ಬಿಎಸ್‌ಎಫ್‌ನಿಂದ ಖರೀದಿಸುತ್ತೇವೆ ಎಂದು ಅವರು ಹೇಳಿದರು.
