ಉದಯವಾಹಿನಿ, ಬೆಂಗಳೂರಿನಲ್ಲಿ ಮಾತಾಡಿದ ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಪೇಮೆಂಟ್ ಸೀಟ್ ಯಾವುದು, ಮೆರಿಟ್ ಸೀಟ್ ಯಾವುದು ಅಂತ ಇನ್ನೂ ತೀರ್ಮಾನ ಆಗಿಲ್ಲ ಅಂತ ಕಾಣಿಸುತ್ತೆ. ಹಾಗಾಗಿ ಪುನಾರಚನೆಗೆ ಸ್ವಲ್ಪ ಸಮಸ್ಯೆ ಆಗಿರಬಹುದು ಅಂತ ಕಾಲೆಳೆದರು.
ಪುನಾರಚನೆ ಮಾಡಲು ಸಿದ್ದರಾಮಯ್ಯ ಬಳಿ ಸ್ವಂತ ಅಧಿಕಾರ ಇದೆ. 4 ತಿಂಗಳ ಹಿಂದೆ ಹೈಕಮಾಂಡ್ ನವ್ರೇ ಪುನಾರಚನೆ ಮಾಡಿ ಅಂದಿದ್ರಲ್ಲ, ಯಾಕಿನ್ನು ಮಾಡ್ತಿಲ್ಲ ಸಿಎಂ? ಅದರರ್ಥ ಏನು, ಇನ್ನೂ ಏನೂ ಸೆಟಲ್ ಆಗಿಲ್ವಾ? ಪೇಮೆಂಟ್ ಸೀಟ್ ಯಾವುದು, ಮೆರಿಟ್ ಸೀಟ್ ಯಾವುದು ಅಂತ ಇನ್ನೂ ತೀರ್ಮಾನ ಆಗಿಲ್ಲ ಅಂತ ಕಾಣತ್ತೆ. ಹಾಗಾಗಿ ಸ್ವಲ್ಪ ಸಮಸ್ಯೆ ಆಗಿರಬಹುದು ಅಂತ ಸಿ.ಟಿ ರವಿ ಟೀಕಿಸಿದರು.
ಸಿದ್ದರಾಮಯ್ಯ ಮೋಸ್ಟ್ ಪವರ್ ಫುಲ್ ಅಂತ ನಾನು ಅನ್ಕೊಂಡಿದ್ದೆ. ದೆಹಲಿ ಗುಲಾಮರಲ್ಲ ನಾವು ಅಂತ ಸಿದ್ದರಾಮಯ್ಯ ಯಾವಾಗಲೂ ಹೇಳೋರು. ಸಿದ್ದರಾಮಯ್ಯ ಸಮರ್ಥರಿದ್ದರೆ, ದೆಹಲಿ ಗುಲಾಮಗಿರಿ ಒಪ್ಕೊಳ್ಳದೇ ಇದ್ರೆ ಸಂಪುಟ ಪುನಾರಚನೆಗೆ ದೆಹಲಿಗೆ ಹೋಗುವ ಅಗತ್ಯ ಏನಿತ್ತು? ಪುನಾರಚನೆ ಸಿಎಂ ಪರಮಾಧಿಕಾರ, ದೆಹಲಿಗೆ ಹೋಗುವ ಅಗತ್ಯ ಇರಲಿಲ್ಲ. ರಾಜ್ಯದ ಜನ ಅಧಿಕಾರ ಕೊಟ್ಟಿದ್ದಾರೆ. ಸಿದ್ದರಾಮಯ್ಯ ಹೇಗೂ ದೆಹಲಿ ಗುಲಾಮರಲ್ಲ. ದೆಹಲಿ ಗುಲಾಮರು ಅಲ್ಲದಿದ್ರೆ ಪುನಾರಚನೆ ಮಾಡಬಹುದಲ್ಲ ಅಂತ ಪ್ರಶ್ನಿಸುವ ಮೂಲಕ ಲೇವಡಿ ಮಾಡಿದರು.
