ಉದಯವಾಹಿನಿ, ಬೆಂಗಳೂರು: ವಸತಿ ಪ್ರದೇಶಗಳಲ್ಲಿ ನಿಯಮಬಾಹಿರವಾಗಿ ವಾಣಿಜ್ಯ/ವಸತಿಯೇತರ ಚಟುವಟಿಕೆಗಳನ್ನು ನಡೆಸುತ್ತಿರುವ ಮತ್ತು ಜಿಬಿಎ ಕಾಯ್ದೆ, 2024ರ ಅನ್ವಯ ವಿಧಿಸಿರುವ ಷರತ್ತು ಹಾಗೂ ನಿಬಂಧನೆಗಳನ್ನು ಪಾಲಿಸದೇ ಕಾರ್ಯನಿರ್ವಹಿಸುತ್ತಿರುವ ಬೆಂಗಳೂರಿನ 14 ಪೇಯಿಂಗ್ ಗೆಸ್ಟ್‌ಗಳಿಗೆ ಬೀಗ ಜಡಿಯಲಾಗಿದೆ.
ಸಾರ್ವಜನಿಕ ಆರೋಗ್ಯ ಹಾಗೂ ಸುರಕ್ಷತೆಯ ಹಿತದೃಷ್ಟಿಯಿಂದ ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಗಿ ಪಡೆಯದೇ ಎಸ್‌ಒಪಿ ಮಾನದಂಡಗಳನ್ನು ಉಲ್ಲಂಘಿಸಿ, ಕಾನೂನುಬಾಹಿರವಾಗಿ ಕಾರ್ಯ ನಿರ್ವಹಿಸುತ್ತಿರುವ ಪಿಜಿಗಳ ವಿರುದ್ಧ ಕಾರ್ಯಾಚರಣೆ ಹಾಗೂ ಉದ್ದಿಮೆ ಪರವಾನಗಿ ವಿಶೇಷ ಅಭಿಯಾನ ನಡೆಸುವಂತೆ ಆರೋಗ್ಯ ವಿಭಾಗ ಅಧಿಕಾರಿಗಳಿಗೆ ಆದೇಶಿಸಿರುವುದಾಗಿ ಪೂರ್ವ ನಗರ ಪಾಲಿಕೆ ಆಯುಕ್ತರಾದ ಡಿ.ಎಸ್.ರಮೇಶ್ ಹೇಳಿದ್ದಾರೆ.
ಬೀಗ ಹಾಕಲಾದ ವಸತಿಗೃಹಗಳ ವಿವರಗಳು
ಮಹದೇವಪುರ ವಿಧಾನಸಭಾ ಕ್ಷೇತ್ರ
* ಎಸ್.ವಿ.ಕೆ. ಪಿ.ಜಿ ಪಟ್ಟಂದೂರು ಅಗ್ರಹಾರ, ಐಟಿಪಿಲ್ ಬ್ಯಾಕ್ ಗೇಟ್
* ವಂಶಿ ಕೃಷ್ಣ ಪಿಜಿ, ಪಟ್ಟಂದೂರು ಅಗ್ರಹಾರ ಐಟಿಪಿಎಲ್ ಹಿಂದಿನ ಗೇಟ್
* ಡ್ವೆಲ್ ಕೋ-ಲಿವಿಂಗ್ ಪಿಜಿ ಲಕ್ಷ್ಮಿನಾರಾಯಣಪುರ, ನಾಗಪ್ಪ ರೆಡ್ಡಿ ಲೇಔಟ್
* ರಾಯಲ್ ಹೋಮ್ ಸ್ಟೇಸ್ ಪಿಜಿ ,ಮೈತ್ರಿ ಲೇಔಟ್, 3ನೇ ಅಡ್ಡರಸ್ತೆ, ಪ್ರಶಾಂತ್ ಲೇಔಟ್, ವೈಟ್‌ಫೀಲ್ಡ್
* ಡ್ರೀಮ್ ಲ್ಯಾಂಡ್ ಪಿಜಿ ವೆಂಟಕಾಮೃತ ನಿಲಯಂ, ಪ್ರಶಾಂತ್ ಲೇಔಟ್, ವೈಟ್‌ಫೀಲ್ಡ್
* ಝೋಲೋ ಅಸ್ಮಿ ಜೆಂಟ್ಸ್ ಪಿಜಿ,1ನೇ ಅಡ್ಡರಸ್ತೆ, ಯಶೋಮತಿ ಆಸ್ಪತ್ರೆಯ ಹಿಂದೆ, ರಾಘವೇಂದ್ರ ಲೇಔಟ್, ಮಾರತ್ ಹಳ್ಳಿ
* ಕೆ.ಆರ್.ಜೆಂಟ್ಸ್ ಪಿ.ಜಿ., 5ನೇ ಕ್ರಾಸ್, ರಾಮಾಂಜನೇಯಲೇಔಟ್ ಮಾರತ್ ಹಳ್ಳಿ
