ಉದಯವಾಹಿನಿ, ಹಾಸನ: ಮೆದುಳು ನಿಷ್ಕ್ರಿಯಗೊಂಡಿದ್ದ ಮಗನ ಅಂಗಾಂಗ ದಾನ ಮಾಡುವ ಮೂಲಕ ಹಾಸನ ಮೂಲದ ದಂಪತಿ ಸಾರ್ಥಕತೆ ಮೆರೆದಿದ್ದಾರೆ. ಆಲೂರು ತಾಲೂಕಿನ ಕಿತ್ತಗಳಲೆ ಗ್ರಾಮದಲ್ಲಿ ನ.19ರಂದು ಬೈಕ್ ಅಪಘಾತ ನಡೆದಿತ್ತು. ಅಪಘಾತದಲ್ಲಿ ನಾಗರಾಜ್ (33) ಎಂಬವರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಮೆದುಳು ನಿಷ್ಕ್ರಿಯಗೊಂಡ ಹಿನ್ನೆಲೆ, ನಾಗರಾಜ್ ಪೋಷಕರಾದ ದೊಡ್ಡಯ್ಯ ಹಾಗೂ ನಿಂಗಮ್ಮ ಅವರು ಮಗನ ಅಂಗಾಂಗ ದಾನ ಮಾಡಿದ್ದಾರೆ.
