ಉದಯವಾಹಿನಿ, ನವದೆಹಲಿ: ಭಾರತೀಯ ಪರಂಪರೆಯನ್ನು ಬಿಂಬಿಸುವ ತಾಜ್ ಮಹಲ್ ಅನ್ನು ಕಾಣಲು ಪ್ರಪಂಚ ದಾದ್ಯಂತ ಪ್ರವಾಸಿಗರು ನಿತ್ಯ ಭೇಟಿ ನೀಡುತ್ತಲೇ ಇರುತ್ತಾರೆ. ಸೆಲೆಬ್ರಿಟಿಗಳಿಂದ ಹಿಡಿದು ಅಂತ ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದವರು ಕೂಡ ತಾಜ್ ಮಹಲ್ ನ ಸೌಂದರ್ಯಕ್ಕೆ ಮನ ಸೋತಿದ್ದಾರೆ. ಅಂತೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರ ಜೂನಿಯರ್ ಡೊನಾಲ್ಡ್ ಟ್ರಂಪ್ ಕೂಡ ಆಗ್ರಾದ ತಾಜ್ ಮಹಲ್‌ಗೆ ಭೇಟಿ ನೀಡಿದ್ದಾರೆ. ಅಲ್ಲಿಂದ ಜೂನಿಯರ್ ಡೊನಾಲ್ಡ್ ಟ್ರಂಪ್ ಅವರು ಜಾಮ್‌ನಗರದಲ್ಲಿರುವ ಅನಂತ್ ಅಂಬಾನಿ ಅವರ ವಂಟಾರಾ ವನ್ಯಜೀವಿ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ಸಂಜೆ ಅನಂತ್ ಅಂಬಾನಿ ಆತಿಥ್ಯದ ವಂಟಾರಾದಲ್ಲಿ ಅವರು ತಂಗಿ ದ್ದಾರೆ. ಸದ್ಯ ಅಂಬಾನಿ ಕುಟುಂಬದ ಜೊತೆಗೆ ದಾಂಡಿಯಾ ನೃತ್ಯ ಮಾಡಿದ್ದ ವಿಡಿಯೋ ಒಂದು ಸೋಶಿಯಲ್ ಮಿಡಿಯಾದಲ್ಲಿ ಭಾರೀ ಆಗಿದೆ.
ಅಂಬಾನಿ ಕುಟುಂಬದವರು ಜೂನಿಯರ್ ಟ್ರಂಪ್ ಅನ್ನು ಅತಿಥಿಯಾಗಿ ಆಹ್ವಾನಿಸಿದ್ದಾರೆ. ಈ ಸಂದರ್ಭ ಶ್ರೀಮಂತ ಉದ್ಯಮಿ ಅಂಬಾನಿ ಅವರೊಂದಿಗೆ ವನ್ಯ ಜೀವಿ ಕೇಂದ್ರಕ್ಕೆ ಮತ್ತು ಜಾಮ್ ನಗರದ ಕೆಲವು ಪ್ರಸಿದ್ಧ ದೇಗುಲಕ್ಕೆ ಕೂಡ ಭೇಟಿ ನೀಡಿದ್ದಾರೆ. ಬಳಿಕ ಸಂಜೆಯ ವೇಳೆ ಕೆಲವು ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೂಡ ಅಂಬಾನಿ ಕುಟುಂಬದವರು ಆಯೋಜಿಸಿದ್ದಾರೆ. ಗುಜರಾತ್ ಸಾಂಪ್ರದಾಯಿಕ ನೃತ್ಯವಾದ ಗರ್ಬಾ ಮತ್ತು ದಾಂಡಿಯಾದಲ್ಲಿ ಜೂನಿಯರ್ ಟ್ರಂಪ್ ಭಾಗಿಯಾಗಿ ಖುಷಿಯ ಕ್ಷಣಗಳನ್ನು ಕಳೆದಿದ್ದಾರೆ.
