ಉದಯವಾಹಿನಿ,ಕಲಬುರಗಿ:  ಟಿ.ನರಸೀಪುರದಲ್ಲಿ ನಡೆದ ಯುವ ಬ್ರಿಗೇಡ್ ಸಂಚಾಲಕನ ಕೊಲೆ ಹಾಗೂ ಜೈನ ಮುನಿಯ ಕೊಲೆಗೆ ಧರ್ಮದ ಲೇಪ ಹಚ್ಚುತ್ತಿರುವ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಕರ್ನಾಟಕ ಡಾ.ಎಚ್.ಸಿ ಮಹಾದೇವಪ್ಪ ಅಭಿಮಾನಿಗಳ ಸಂಘದ ರಾಜ್ಯಾದ್ಯಕ್ಷ ಓಂಕಾರ ವಠಾರ(ಕೆರಿಬೋಸಗಾ) ಅವರು ಆಗ್ರಹಿಸಿದ್ದಾರೆ. ಜೈನಮುನಿ ರಾಮಕುಮಾರ ನಂದಿ ಮಹರಾಜರ ಹತ್ಯೆ ಮತ್ತು ಟಿ.ನರಸೀಪುರದಲ್ಲಿ ನಡೆದ ವೇಣುಗೋಪಾಲ ಅವರ ಕೊಲೆ ಪ್ರಕರಣವನ್ನು ಎಲ್ಲಾ ಆಯಾಮಗಳಲ್ಲಿ ಸಮಗ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು. ಹತ್ಯೆಗೆ ವಯಕ್ತಿಕ ಕೊಲೆಗೆ ಧರ್ಮದ ಬಣ್ಣ ಕಟ್ಟಿ ಹಿಂದೂಗಳ ಕೊಲೆಯಾಗುತ್ತಿದೆ.ಹಿಂದೂಗಳಿಗೆ ರಕ್ಷಣೆ ನೀಡಿ ಎಂದು ಸೂಲಿಬೆಲೆ ಜನರನ್ನು ದಿಕ್ಕು ತಪ್ಪಿಸಲು ಪ್ರಚೋದನೆ ನೀಡುತ್ತಾ ಅಶಾಂತಿಯ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ.ಸಾವಿನಲ್ಲಿ ರಾಜಕೀಯ ಮಾಡುತ್ತಾ ವೈಯಕ್ತಿಕ ಕೊಲೆಗೆ ಧರ್ಮದ ಬಣ್ಣ ಹಚ್ಚುತ್ತಿರುವ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!