ಉದಯವಾಹಿನಿ, ಕೆ.ಆರ್.ಪೇಟೆ: ತಾಲ್ಲೂಕಿನ ಕಿಕ್ಕೇರಿ ಹೋಬಳಿಯ ಚುಜ್ಜಲಕ್ಯಾತನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಸಣ್ಣಪುಟ್ಟ ಮುಳ್ಳಿನ ಗಿಡಗಳನ್ನು ಶೀಘ್ರವಾಗಿ ಸ್ವಚ್ಚಗೊಳಿಸುವಂತೆ ಅಕ್ಷರದಾಸೋಹ ಸಹಾಯಕ ನಿರ್ದೇಶಕ ಸಿ.ಎನ್.ಯತೀಶ್ ತಿಳಿಸಿದರು. ಘಟನೆಗೆ ಸಂ¨AಧಿಸಿದAತೆ ಅವರು ಸಾಮಾಜಿಕ ಜಾಲತಾಣಗಳಲ್ಲಿ ಬಂದಿರುವ ಮಾಹಿತಿ ಆಧರಿಸಿ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ಶಾಲೆಯ ಆವರಣದಲ್ಲಿ ಸಣ್ಣಸಣ್ಣ ಮುಳ್ಳಿನ ಗಿಡಗಳು ಹರಡಿದ್ದು ಇದರ ವಿಚಾರವಾಗಿ ಈಗಾಗಲೇ ಎಸ್.ಡಿ.ಎಂ.ಸಿ ಅದ್ಯಕ್ಷ ಜಯರಾಮು, ಶಾಲೆಯ ಮುಖ್ಯ ಶಿಕ್ಷಕ ಧರ್ಮಪ್ಪ ಶಾಲಾಭೀವೃದ್ದಿ ಸಮಿತಿಯ ಸಭೆ ನೆಡೆಸಿ ಶಾಲೆ ರಜಾ ದಿನವಾದ ಶನಿವಾರ ಅಥವಾ ಭಾನುವಾರ ಮುಳ್ಳಿನ ಗಿಡಗಳಿಗೆ ಔಷಧಿ ಸಿಂಪಡಿಸುವುದಾಗಿ ತಿರ್ಮಾನ ಕೈಕೊಂಡಿದ್ದಾರೆ.
ಆದರೂ ಕೆಲವರು ಮಾಹಿತಿಯ ಕೊರತೆಯಿಂದ ಇದನ್ನೇ ದುರುಪಯೋಗಪಡಿಸಿಕೊಳ್ಳಲು ಯತ್ನಿಸಿದ್ದಾರೆ. ಮುಖ್ಯ ಶಿಕ್ಷಕ ಧರ್ಮಪ್ಪರವರು ಸುಮಾರು ೧೮ ವರ್ಷದಿಂದ ಈ ಶಾಲೆಯಲ್ಲಿ ಕೆಲಸ ಮಾಡಿಕೊಂಡು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದು, ಮಕ್ಕಳಿಗೆ ಉತ್ತಮ ವಿಧ್ಯಾಭ್ಯಾಸ ನೀಡುತ್ತಾ ಬಂದಿದ್ದಾರೆ ಇವರ ಬಗ್ಗೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಈಗಾಗಲೇ ಧರ್ಮಪ್ಪ ರವರು ಶಾಲಾ ಶಿಕ್ಷಕರ ಸಂಘದ ರಾಜ್ಯ ಸಂಘದ ಉಪಾದ್ಯಕ್ಷರಾಗಿದ್ದು ಶಾಲೆಯ ಮುಖ್ಯ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅವರ ವಿರುದ್ದ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ ಶಿಕ್ಷಣ ಸಂಸ್ಥೆಗಳಲ್ಲಿ ವಿನಾಕಾರಣ ರಾಜಕೀಯ ಬೆರೆಸಬಾರದು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕ ವೀರಭದ್ರಯ್ಯ, ಸಿ.ಆರ್.ಪಿ. ಶ್ರೀಕಾಂತರಾಜೇ ಅರಸು, ಎಸ್‌ಡಿ.ಎಂಸಿ ಅದ್ಯಕ್ಷ ಜಯರಾಮು, ಮುಖ್ಯ ಶಿಕ್ಷಕ ಧರ್ಮಪ್ಪ, ಸಹಶಿಕ್ಷಕಿ ನೇತ್ರಮ್ಮ, ಲಲಿತಾ, ಗ್ರಾಮದ ಮುಖಂಡರಾದ ಮಲ್ಲೇಶ್, ಬಿ.ಬಸವರಾಜು, ಪುನಿಗೌಡ್ರು, ಬಸವರಾಜು, ಚಂದ್ರೇಗೌಡ್ರು, ದೇವರಾಜು, ಸೇರಿದಂತೆ ಹಲವರಿದ್ದರು.
