ಉದಯವಾಹಿನಿ, ಸೋಷಿಯಲ್ ಮೀಡಿಯಾ ಸ್ಟಾರ್ ಸೋನು ಶ್ರೀನಿವಾಸ್ ಗೌಡ ಬಗೆ ಬಗೆಯ ಫೋಟೋ ಶೂಟ್ ಮಾಡಿ ಆಗಾಗ ಅಪ್‌ಡೇಟ್ ಮಾಡುತ್ತಲೇ ಇರುತ್ತಾರೆ. ದೇಶ-ವಿದೇಶ ಸುತ್ತಾಟ, ವೀಕೆಂಡ್ ಮಸ್ತಿ ಎಲ್ಲವನ್ನೂ ಸೆರೆಹಿಡಿದು ಜಾಲತಾಣದಲ್ಲಿ ಹಾಕುತ್ತಲೇ ಇರುತ್ತಾರೆ. ಸೋನು ಪೋಸ್ಟ್‌ಗೆ ತಹರೇವಾರಿ ಕಾಮೆಂಟ್ಸ್‌ಗಳು ಬರುತ್ತಲೇ ಇರುತ್ತೆ ಆದ್ರೆ ಯಾವುದಕ್ಕೂ ತಲೆಕೆಡಸಿಕೊಳ್ಳದೇ ಸೋನು ಪೋಸ್ಟ್ ಮಾಡ್ತಾನೆ ಇರ್ತಾರೆ. ಇದೀಗ ಕಾಂತಾರ ʻಕನಕವತಿʼಯಾಗಿ ಬದಲಾಗಿದ್ದಾರೆ.
ಹೌದು. ಸೋನು ಶ್ರೀನಿವಾಸ್ ಗೌಡ ಕನಕವತಿಯ ಗೆಟಪ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಕಾಂತಾರ ಚಾಪ್ಟರ್-1 ಸಿನಿಮಾ ಮೂಲಕ ಗಮನ ಸೆಳೆದ ರುಕ್ಮಿಣಿ ವಸಂತ್ ಅವರ ಕನಕವತಿಯ ಪಾತ್ರದ ಗೆಟಪ್ ಫೋಟೋಗಳು ಸಾಕಷ್ಟು ಟ್ರೆಂಡ್ ಕ್ರಿಯೇಟ್ ಮಾಡಿದ್ದವು. ಅದೇ ಗೆಟಪ್‌ನಲ್ಲಿ ಸೋನು ಫೋಟೋ ಶೂಟ್ ಮಾಡಿಸಿ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕನಕವತಿಯ ಗೆಟಪ್‌ನಲ್ಲಿ ಸೋನು ಅವರನ್ನ ನೋಡಿ ತಹರೇವಾರಿ ಕಾಮೆಂಟ್ಸ್ ಮಾಡುತ್ತಿದ್ದಾರೆ. ಕಾಂತಾರ ಚಾಪ್ಟರ್-3ಗೆ ಸೋನು ಸೆಲೆಕ್ಟ್ ಅಂತೆಲ್ಲ ಕಾಮೆಂಟ್ಸ್ ಹಾಕಿದ್ದಾರೆ. ಸೋನು ಫೋಟೋ ಈಗ ಸಖತ್ ವೈರಲ್ ಆಗ್ತಿವೆ.
