ಉದಯವಾಹಿನಿ, ಮುಂಬೈ: ಭಾರತ ಮತ್ತು ಶ್ರೀಲಂಕಾದ ಜಂಟಿ ಆತೀತ್ಯದಲ್ಲಿ ನಡೆಯಲಿರುವ 2026ರ ಐಸಿಸಿ ಟಿ20 ವಿಶ್ವಕಪ್ ವೇಳಾಪಟ್ಟಿ ನ.25ರಂದು ಪ್ರಕಟವಾಗಲಿದೆ. ಅಂದು ಸಂಜೆ 6:30ಕ್ಕೆ ಐಸಿಸಿ ವೇಳಾಪಟ್ಟಿ ಪ್ರಕಟಿಸಲಿದೆ. ವಿಶ್ವಕಪ್ ಹಿನ್ನೆಲೆ 20 ತಂಡಗಳನ್ನ 4 ಗುಂಪುಗಳಲ್ಲಿ ವರ್ಗೀಕರಿಸಲಾಗಿದ್ದು, ಸಾಂಪ್ರದಾಯಿಕ ಎದುರಾಳಿ ಭಾರತ-ಪಾಕ್ ಎರಡೂ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿವೆ. ಸೆಪ್ಟೆಂಬರ್‌ನಲ್ಲಿ ಮುಕ್ತಾಯಗೊಂಡ ಏಷ್ಯಾಕಪ್ ಟೂರ್ನಿಯಲ್ಲೂ ಭಾರತ-ಪಾಕ್ ಒಂದೇ ಗುಂಪಿನಲ್ಲಿದ್ದವು, ಹೀಗಾಗಿ ಲೀಗ್ ಸುತ್ತು, ಸೂಪರ್ ಫೋರ್ ಹಾಗೂ ಫೈನಲ್ ಸೇರಿ 3 ಬಾರಿ ಮುಖಾಮುಖಿಯಾಗಿದ್ದವು. ಮೂರು ಬಾರಿಯೂ ಪಾಕ್ ಸೋಲು ಕಂಡಿತು. ಹೀಗಾಗಿ ಟಿ20 ವಿಶ್ವಕಪ್‌ನಲ್ಲಿ ಗುಂಪು ಹಂತದಿಂದಲೇ ಕಠಿಣ ಪೈಪೋಟಿ ನಿರೀಕ್ಷಿಸಲಾಗಿದೆ.
ಈ ಬಾರಿ ಭಾರತದ ಬಳಿಯೇ ಆತಿಥ್ಯ ಇದ್ದರೂ ಸೆಮಿಸ್ ಅಥವಾ ಫೈನಲ್‌ಗೆ ಪಾಕ್ ತಲುಪಿದ್ರೆ, ಆ ಎಲ್ಲಾ ಪಂದ್ಯಗಳು ಶ್ರೀಲಂಕಾದಲ್ಲೇ ನಡೆಯಲಿದೆ. ಏಕೆಂದ್ರೆ ಪಾಕ್ ಆತಿಥ್ಯದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿ ವೇಳೆ ಭಾರತ ತಂಡ ಪಾಕ್‌ಗೆ ತೆರಳಲು ನಿರಾಕರಿಸಿದರು. ಆ ಬಳಿಕ ನಡೆದ ಪಹಲ್ಗಾಮ್ ಅಟ್ಯಾಕ್, ಅದಕ್ಕೆ ಪ್ರತಿಯಾಗಿ ನಡೆದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಿಂದ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಸಂಪೂರ್ಣವಾಗಿ ಮುರಿದು ಬಿದ್ದಿತು.
ವರದಿಗಳ ಪ್ರಕಾರ, ಆತಿಥೇಯ ಭಾರತ ಮತ್ತು ಶ್ರೀಲಂಕಾ ತಂಡಗಳು ಸಂಪೂರ್ಣ ವಿಭಿನ್ನ ಸವಾಲುಗಳನ್ನ ಎದುರಿಸಲಿವೆ. ಭಾರತ ತಂಡ ಸುಲಭ ಎನ್ನಬಹುದಾದ ಗ್ರೂಪ್‌ನಲ್ಲಿದ್ದರೆ ಶ್ರೀಲಂಕಾ ಕಠಿಣ ಸ್ಪರ್ಧೆಯಿರುವ ಗ್ರೂಪ್‌ನಲ್ಲಿ ಸಿಲುಕಿದೆ. ಹೀಗಾಗಿ ಭಾರತ ಸೆಮಿಸ್ ಪ್ರವೇಶಿಸೋದು ಸುಲಭ ಎನ್ನುವಂತಾಗಿದೆ
