ಉದಯವಾಹಿನಿ, ಬಿಗ್‌ಬಾಸ್ ಕನ್ನಡ ಸೀಸನ್ 12ರ ಮನೆಯಿಂದ ಈ ವಾರ ರಿಷಾ ಗೌಡ ಹೊರಬಂದಿದ್ದಾರೆ.ಈ ವಾರ ಮನೆಯಲ್ಲಿ ಒಟ್ಟು 9 ಸ್ಪರ್ಧಿಗಳು ನಾಮಿನೇಟ್ ಆಗಿದ್ದರು. ಎಪಿಸೋಡ್‌ನಲ್ಲಿ ರಕ್ಷಿತಾ, ಸ್ಪಂದನಾ ಹಾಗೂ ಅಭಿಷೇಕ್ ಸೇಫ್ ಆಗಿದ್ದರು. ಎಪಿಸೋಡ್‌ನಲ್ಲಿ ಸುದೀಪ್ ಅವರು ಮೊದಲು ಮಾಳು ಹಾಗೂ ಸೂರಜ್ ಅನ್ನು ಸೇಫ್ ಮಾಡಿದರು.
ಆನಂತರ ಸುದೀಪ್ ಟಾಸ್ಕ್‌ವೊಂದನ್ನು ನೀಡಿದರು. ನೀಡಿದ್ದ ಕೇಕ್‌ನ್ನು ಕೈ ಉಪಯೋಗಿಸದೇ ತಿಂದಾಗ ಕೊನೆಗೆ ಯಾರು ಸೇಫ್ ಎಂದು ತಿಳಿಯುತ್ತದೆ ಎಂದು ತಿಳಿಸಿದ್ದರು. ಅದರಂತೆ ಡೇಂಜರ್ ಜೋನ್‌ನಲ್ಲಿದ್ದ ನಾಲ್ವರು ಕೇಕ್ ತಿಂದಾಗ ಅಶ್ವಿನಿ ಸೇಫ್ ಆದರು. ಬಳಿಕ ಜಾನ್ವಿ ಸೇಫ್ ಆದರು. ಕೊನೆಗೆ ರಿಷಾ ಹಾಗೂ ಧ್ರುವಂತ್ ಡೇಂಜರ್ ಜೋನ್‌ನಲ್ಲಿದ್ದರು. ಧ್ರುವಂತ್ ಸೇಫ್ ಆಗಿ ರಿಷಾ ಔಟ್ ಆದರು.
ವೈಲ್ಡ್ ಕಾರ್ಡ್ ಮೂಲಕ ಬಿಗ್‌ಬಾಸ್ 12ರ ಮನೆಗೆ ಎಂಟ್ರಿ ಕೊಟ್ಟವರು ರಿಷಾ. ಬರುತ್ತಿದ್ದಂತೆಯೇ ಎಲ್ಲರ ಮುಂದೆ ಅಬ್ಬರಿಸಿ, ಸ್ಟ್ರಾಂಗ್‌ ಎಂದು ತೋರಿಸಿಕೊಂಡಿದ್ದರು. ಪ್ರಾರಂಭದಲ್ಲಿ ಎಲ್ಲರೊಂದಿಗೆ ತಮಾಷೆ ಮಾಡಿಕೊಂಡು ಚೆನ್ನಾಗಿಯೇ ಇದ್ದರು. ಆದರೆ ಮತ್ತೆ ಮತ್ತೆ ಜಗಳ, ಕಿರುಚಾಡುತ್ತಲೇ ಕಾಲಕಳೆದರು. ಸಣ್ಣ ವಿಚಾರಕ್ಕೆ ಧ್ವನಿ ಏರಿಸಿ ಮಾತನಾಡುವುದು, ಗರ್ವದಿಂದಿರುವುದು, ಉದ್ಧಟತನ ಇದೆಲ್ಲವೂ ಇವರು ಮನೆಯಿಂದ ಹೊರಹೋಗಲು ಕಾರಣ ಎನ್ನಲಾಗಿದೆ.
ಇನ್ನೂ ಇತ್ತೀಚಿಗೆ ಬಾತ್‌ರೂಮ್ ಬಳಿ ರಿಷಾ ಹಾಗೂ ಗಿಲ್ಲಿ ಬಕೆಟ್ ವಿಷಯಕ್ಕೆ ಗಲಾಟೆ ಮಾಡಿಕೊಂಡಿದ್ದರು. ಆದರೆ ಬಕೆಟ್ ಕೊಡದಿದ್ದಕ್ಕೆ ರಿಷಾ ಬಟ್ಟೆಯನ್ನು ಗಿಲ್ಲಿ ಬಾತ್‌ರೂಮ್ ಬಳಿ ತಂದು ಹಾಕಿದ್ದರು. ಇದಕ್ಕೆ ಸಿಟ್ಟಿಗೆದ್ದ ರಿಷಾ ಗಿಲ್ಲಿಯವರಿಗೆ ಹೊಡೆದು ಸುದ್ದಿಯಲ್ಲಿದ್ದರು. ಈ ವಾರ ಹೆಚ್ಚು ವೋಟ್‌ ಸಿಗದ ಕಾರಟ ಮನೆಯಿಂದ ಹೊರಬಂದಿದ್ದಾರೆ. ಸದ್ಯ ಮನೆಯಿಂದ ಹೊರಬಂದಿದ್ದಕ್ಕೆ ಗಿಲ್ಲಿಗೆ ಹೊಡೆದಿದ್ದೇ ಮುಳುವಾಯ್ತು ಎನ್ನುವಂತಾಗಿದೆ

Leave a Reply

Your email address will not be published. Required fields are marked *

error: Content is protected !!