ಉದಯವಾಹಿನಿ, ಸಿನಿಮಾದಲ್ಲಿ ಹಾಡು ನೋಡಿದಾಗ ಅಸಭ್ಯವೇನು ಇಲ್ಲವೆನ್ನುವುದು ತಿಳಿದು ಬರುತ್ತದೆ ಎಂದು ತಮ್ಮ ಹಾಡನ್ನು ಸಮರ್ಥಿಸಿಕೊಂಡಿದ್ದಾರೆ ಪ್ರೇಮ್.
ಬಿಡುಗಡೆಗೆ ಸಜ್ಜಾಗಿರುವ ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ‘ಕೆಡಿ ದಿ ವಿಲನ್’ ಹಾಡೊಂದು ಇದೀಗ ಸಂಸತ್ತಿನಲ್ಲಿ ಚರ್ಚೆಗೆ ಕಾರಣವಾಗಿದೆ. ಜೋಗಿ ಪ್ರೇಮ್ ಬರೆದ ‘ಸೆರಗು ಸರ್ಸೆ’ ಹಾಡು ನಿನ್ನೆ ಬಿಡುಗಡೆಯಾದಂದಿನಿಂದ ಚರ್ಚೆಯಲ್ಲಿದೆ.
ಕೆವಿಎನ್ಸ್ ಸಂಸ್ಥೆ ನಿರ್ಮಾಣದ ಈ ಸಿನಿಮಾ ಮೂರು ವರ್ಷಗಳಿಂದ ನಿರ್ಮಾಣ ಹಂತದಲ್ಲಿದೆ. ಧ್ರುವ ಸರ್ಜಾ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದಲ್ಲಿ ಬಾಲಿವುಡ್ ದಿಗ್ಗಜರಾದ ಸಂಜಯ್ ದತ್ ಮತ್ತು ಶಿಲ್ಪಾ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾವಾಗಿರುವುದರಿಂದ ಭರ್ಜರಿ ಪ್ರಚಾರ ಪಡೆದಿದ್ದ ಈ ಚಿತ್ರದ ಹಾಡು ಇದೀಗ ವಿವಾದಕ್ಕೆ ಎಡೆಯಾಗಿದೆ.
